ಕಾಸರಗೋಡು: ಜೋರು ಗಾಳಿ ಮಳೆಗೆ ಬಿದ್ದ ಮರ, 11 ವರ್ಷದ ಬಾಲಕಿ ಸಾವು
- DoubleClickMedia
- Jul 3, 2023
- 1 min read

ಕಾಸರಗೋಡು ಜುಲೈ 3, 2023: ಜೋರಾದ ಗಾಳಿ ಮತ್ತು ಮಳೆಗೆ ಮರವೊಂದು ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಜುಲೈ 3 ರಂದು ಸಂಜೆ ಪುತ್ತಿಗೆ ಸಮೀಪದ ಅಂಗಡಿಮೊಗರು ಎಂಬಲ್ಲಿ ನಡೆದಿದೆ.
ಮೃತಪಟ್ಟಪಟ್ಟ ಬಾಲಕಿಯನ್ನು ಅಂಗಡಿಮೊಗೇರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ವಿದ್ಯಾರ್ಥಿನಿ ಆಯಿಷತ್ ಮಿನ್ಹಾ ಎಂದು ಗುರುತಿಸಲಾಗಿದೆ.
ಐಶತ್ ಆಟದಲ್ಲಿ ತೊಡಗಿದ್ದಾಗ ಸಂಜೆ 4:00 ರ ಸುಮಾರಿಗೆ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ಮರ ಬಿದ್ದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ಆಕೆಯನ್ನು ಕುಂಬಳೆಯಲ್ಲಿರುವ ಆಸ್ಪತ್ರೆಗೆ ಸಾಗಿಸಿದರೂ ಆಕೆ ಬದುಕುಳಿಯಲಿಲ್ಲ.
ಆಯಿಷತ್ ಮಿನ್ಹಾ, ಎಂ ಯೂಸುಫ್ ಮತ್ತು ಫಾತಿಮ್ಮತ್ ಸೈನಬಾ ದಂಪತಿಯ ಪುತ್ರಿ
Comments