top of page

ಅಧಿಕೃತ ಹೊಸ ಮ್ಯಾಪ್‌ನಲ್ಲಿ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಅನ್ನು ಸೇರಿಸಿಕೊಂಡ ಚೀನಾ

  • Writer: DoubleClickMedia
    DoubleClickMedia
  • Aug 29, 2023
  • 1 min read



ಚೀನಾ ಸರ್ಕಾರ ಸೋಮವಾರ ಆಗಸ್ಟ್ 28ರಂದು ಅಧಿಕೃತವಾಗಿ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ತನ್ನ ಭೂಪ್ರದೇಶವೆಂದು ಘೋಷಿಸಿದೆ. ಈ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ಮೊಂಡುತನವನ್ನು ಮತ್ತೆ ಮುಂದುವರಿಸಿದೆ.



ಚೀನಾ 2023ರಲ್ಲಿ ಅಧಿಕೃತವಾಗಿ ನವೀಕರಿಸಿದ ನಕ್ಷೆಯನ್ನು, ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ಪ್ರಮಾಣಿತ ನಕ್ಷೆ ಸೇವಾ ವೆಬ್‌ಸೈಟ್​​ನಲ್ಲಿ ಬಿಡುಗಡೆ ಮಾಡಿದೆ. ಜಾಗತಿಕ ಭೌಗೋಳಿಕತೆಯ ಮೇಲೆ ಚೀನಾದ ದೃಷ್ಟಿಕೋನವನ್ನು ಈ ನಕ್ಷೆಯಲ್ಲಿ ತಿಳಿಸಲಾಗಿದೆ. ಆದರೆ ಈಗಾಗಲೇ ನೆರೆಯ ರಾಷ್ಟ್ರಗಳೊಂದಿಗೆ (ಭಾರತ) ಗಡಿ ವಿವಾದ ಇದ್ದರು ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ರಾಷ್ಟ್ರೀಯ ಗಡಿಗಳ ರೇಖಾಚಿತ್ರ ವಿಧಾನವನ್ನು ಆಧರಿಸಿ ಈ ನಕ್ಷೆಯನ್ನು ರಚಿಸಲಾಗಿದೆ ಎಂದು ಚೀನಾ ಸರ್ಕಾರಿ ಟ್ವಿಟರ್​​ನಲ್ಲಿ ತಿಳಿಸಲಾಗಿದೆ.


ಗ್ಲೋಬಲ್ ಟೈಮ್ಸ್ ಪ್ರದರ್ಶಿಸಿರುವ ನಕ್ಷೆಯಲ್ಲಿ 1962ರ ಯುದ್ಧದಲ್ಲಿ ಅಕ್ಸಾಯ್ ಚಿನ್ ಆಕ್ರಮಿಸಿಕೊಂಡಿದ್ದು, ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಂಡಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಅವಿಭಾಜ್ಯ ಅಂಗವಾಗಿ ಉಳಿಯುತ್ತದೆ ಎಂದು ಭಾರತ ಸರ್ಕಾರ ಒತ್ತಿ ಹೇಳಿತ್ತಿರುವಾಗಲೂ ಚೀನಾ ಈ ಪ್ರಯತ್ನಕ್ಕೆ ಕೈ ಹಾಕಿದೆ. ನಕ್ಷೆಯು ತೈವಾನ್ ಅನ್ನು ಚೀನಾವು ತನ್ನ ಮುಖ್ಯ ಭೂಭಾಗದ ಭಾಗವೆಂದು ಹೇಳಿಕೊಂಡಿದೆ.



Comments


bottom of page