
ಮಂಗಳೂರು, ಆಗಸ್ಟ್ 30: ಚಲಿಸುತ್ತಿದ್ದ ಬಸ್ಸಿನ ಫುಟ್ ಬೋರ್ಡ್ನಲ್ಲಿ ನಿಂತಿದ್ದ ಬಸ್ ನಿರ್ವಾಹಕ ಟರ್ನಿಂಗ್ನಲ್ಲಿ ಆಯ ತಪ್ಪಿ ರಸ್ತೆ ಮೇಲೆ ಬಿದ್ದು ಮೃತಪಟ್ಟಿರು ಘಟನೆ ಮಂಗಳೂರು ನಗರದ ನಂತೂರು ವೃತ್ತದಲ್ಲಿ ನಡೆದಿದೆ. ಸುರತ್ಕಲ್ ತಡಂಬೈಲ್ ನಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲದ ಈರಯ್ಯ (23) ಸಾವನ್ನಪ್ಪಿದ ಕಂಡಕ್ಟರ್.
ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬಸ್ ತೆರಳುವ ವೇಳೆ ಘಟನೆ ಸಂಭವಿಸಿದ್ದು, ಈರಯ್ಯ ಬಸ್ಸಿನ ಎದುರು ಬಾಗಿಲ ಬಳಿ ನಿಂತಿದ್ದ. ಬಸ್ಸು ಸರ್ಕಲ್ ನಲ್ಲಿ ತಿರುವು ಪಡೆಯುವ ರಭಸಕ್ಕೆ ಕೈ ಜಾರಿ, ಈರಯ್ಯ ರಸ್ತೆಗೆ ಎಸೆಯಲ್ಪಟ್ಟಿದ್ದ. ತಕ್ಷಣ ಸ್ಥಳದಲ್ಲಿಯೆ ಇದ್ದ ಟ್ರಾಫಿಕ್ ಪೊಲೀಸರು ಮತ್ತು ಸ್ಥಳೀಯರು ಈರಯ್ಯನ್ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಈರಯ್ಯ ಕೊನೆಯುಸಿರೆಳೆದಿದ್ದಾನೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.
ಕಂಡಕ್ಟರ್ ರಸ್ತೆಗೆಸೆಯಲ್ಪಟ್ಟ ವಿಡಿಯೋ ಕಾರೊಂದರ ಡ್ಯಾಷ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Comentários