top of page

ಕೊಪ್ಪ: 9ನೇ ತರಗತಿ ವಿದ್ಯಾರ್ಥಿ ಸಾವಿನ ಸುತ್ತ ಅನುಮಾನದ ಹುತ್ತ

  • Writer: DoubleClickMedia
    DoubleClickMedia
  • Aug 29, 2023
  • 1 min read

Koppa boy

ಚಿಕ್ಕಮಗಳೂರು ಆಗಸ್ಟ್‌,28: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಬಿಜಿಎಸ್ (ವೆಂಕಟೇಶ್ವರ ವಿದ್ಯಾ ಮಂದಿರ) ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇವಲ 750 ರೂ. ಸಾಲಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.



ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹಿರೇಬಳ್ಳೇಕೆರೆ ಮೂಲದ ವಿದ್ಯಾರ್ಥಿ ಶ್ರೀನಿವಾಸ್ ಆಗಸ್ಟ್ 22ರಂದು ಹಾಸ್ಟೆಲ್ ನಲ್ಲಿ ನೇಣುಬಿಗಿದುಕೊಂಡಿದ್ದ. ಆದರೆ ಇದೀಗ ವಿದ್ಯಾರ್ಥಿ ಬರೆದಿಟ್ಟಿದ್ದ ಡೆತ್ ನೋಟ್ ವೈರಲ್ ಆಗಿದ್ದು ಸಾವಿನ ಸುತ್ತ ಅನುಮಾನದ ಹುತ್ತ ಮೂಡಿಸಿದೆ. ಶ್ರೀನಿವಾಸ್ ಪಾಲಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.



ವೈರಲ್ ಆಗಿರುವ ಡೆತ್ ನೋಟ್ ನಲ್ಲಿ ‘ನನ್ನ ಸಾವಿಗೆ ಕಾರಣ drushya was trochring to give to money and I take 750₹ from anty and anty said 3000₹ for my death reason person are sahil drushya ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.


750 ರೂ. ಸಾಲಕೊಟ್ಟು ಹಾಸ್ಟೆಲ್ ಸಿಬ್ಬಂದಿ 3 ಸಾವಿರ ರೂ. ಕೇಳಿರುವ ಬಗ್ಗೆ ಶ್ರೀನಿವಾಸ್ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲೆ ಈ ಕುರಿತು ಸೂಕ್ತವಾಗಿ ಸ್ಪಂದಿಸಿಲ್ಲ. ಅಲ್ಲದೆ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದ್ದು, ಆತನಿಗೆ, ಅದೂ ಹಾಸ್ಟೆಲ್ ನಲ್ಲಿ ಸೀರೆ ಎಲ್ಲಿಂದ ಸಿಕ್ಕಿತು? ಎಂದು ಪ್ರಶ್ನಿಸಿದ್ದಾರೆ.




Comments


bottom of page