7 ತಿಂಗಳ ಮಗುವಿನ ಹೊಟ್ಟೆಯಲ್ಲಿತ್ತು 2 ಕೆ.ಜಿ ಭ್ರೂಣ
- DoubleClickMedia
- Aug 1, 2023
- 1 min read

ಉತ್ತರ ಪ್ರದೇಶ: ಮಗುವಿನ ಗರ್ಭದೊಳಗೆ ಮತ್ತೊಂದು ಭ್ರೂಣವನ್ನು ಕಂಡು ವೈದ್ಯ ಲೋಕವೇ ಅಚ್ಚರಿಗೊಳಗಾಗಿದ್ದಾರೆ. ಏಳು ತಿಂಗಳ ಕೂಸಿನ ಹೊಟ್ಟೆಯಲ್ಲಿ 2 ಕೆ.ಜಿ. ತೂಕದ ಭ್ರೂಣವನ್ನು ವೈದ್ಯರು ಯಶಸ್ವಿಯಾಗಿ ಹೊರತೆಗಿದ್ದಾರೆ.
ಪ್ರತಾಪಗಢ ಮೂಲದ ರೈತರೊಬ್ಬರ 7 ತಿಂಗಳ ಮಗು ಆಗಾಗ ಹೊಟ್ಟೆ ನೋವಿನಿಂದ ಅಳುತ್ತಿತ್ತು. ಹಲವು ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಗುವಿನ ತಂದೆ, ಪ್ರತಾಪಗಢದ ಸರೋಜಿನಿ ನಾಯ್ಡು ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವಿಗೆ ಸಿಟಿ ಸ್ಕ್ಯಾನ್ ಮಾಡಿದಾಗ ಮಗುವಿನ ಹೊಟ್ಟೆಯಲ್ಲಿ2 ಕೆಜಿ ಭ್ರೂಣವಿದೆ ಎಂದು ತಿಳಿದು ತಿಳಿದುಬಂದಿತು. ಕೊನೆಗೆ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು 4 ಗಂಟೆಗಳ ಆಪರೇಷನ್ ಬಳಿಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದೆ.
ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಯನ್ನು Fetus in fetu (FIF) ಎಂದು ಕರೆಯಲಾಗುತ್ತದೆ. ಎರಡು ವೀರ್ಯ ಮತ್ತು ಎರಡು ಅಂಡಾಣುಗಳು ಒಟ್ಟಿಗೆ ಸೇರಿ ಎರಡು ಜೈಗೋಟ್‌ಗಳನ್ನು ರೂಪಿಸಿದಾಗ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ ಎಂದು ಡಾ.ಡಿ.ಕುಮಾರ್ ಹೇಳಿದ್ಧಾರೆ. ಮೊದಲ ಜೈಗೋಟ್‌ನಿಂದ ಮಗು ರೂಪುಗೊಂಡ ನಂತರ, ಎರಡನೇ ಜೈಗೋಟ್ ಮಗುವಿನ ಒಳಗಡೆ ಹೋಗುತ್ತದೆ. ಈ ಕಾರಣದಿಂದಾಗಿ, ಭ್ರೂಣವು ಹೊಟ್ಟೆಯಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಈ ಎರಡನೇ ಜೈಗೋಟ್ ಮಗುವಿನ ದೇಹದ ಹೊರಗೆ ಎಂದರೆ ತಾಯಿಯ ಗರ್ಭದಲ್ಲಿ ರೂಪುಗೊಂಡಿದ್ದರೆ, ಅದು ಅವಳಿ ಮಗುವಿನ ರೂಪವನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.
Comments