top of page

ನಟ ಮಾಸ್ಟರ್‌ ಆನಂದ್‌ಗೆ ನಿವೇಶನ ನೀಡುವುದಾಗಿ ವಂಚನೆ: ದೂರು ದಾಖಲು

  • Writer: DoubleClickMedia
    DoubleClickMedia
  • Jun 26, 2023
  • 1 min read


MasterAnandh


ಬೆಂಗಳೂರು ಜೂ.26: ನಟ, ನಿರ್ಮಾಪಕ, ನಿರ್ದೇಶಕ ಮಾಸ್ಟರ್ ಮಾಸ್ಟರ್‌ ಆನಂದ್‌ಗೆ ನಿವೇಶನ ನೀಡುವುದಾಗಿ ಖಾಸಗಿ ಕಂಪನಿಯು ವಂಚನೆ ಮಾಡಿದ್ದು, ನಟ ಆನಂದ್‌ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.


ನಿವೇಶನ ನೀಡುವುದಾಗಿ ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು ಆನಂದ್ ಅವರಿಗೆ 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎಂದು ಕಂಪನಿ ವಿರುದ್ದ ಮಾಸ್ಟರ್ ಆನಂದ್ ಪೊಲೀಸರಿಗೆ ದೂರು ನೀಡಿದ್ದಾರೆ.



ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೀಡುವುದಾಗಿ ಲೀಪ್ ವೆಂಚರ್ಸ್ ಕಂಪೆನಿಯು ಹೇಳಿತ್ತು. ಮನಿಕಾ ಕೆಂ.ಎಂ ಇಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಲೀಪ್ ವೆಂಚರ್ಸ್ ಹೇಳಿತ್ತು. ಕಂಪನಿ ಮಾತು ಕೇಳಿಕೊಂಡು ಮಾಸ್ಟರ್ ಆನಂದ್ ಸೈಟ್ 70 ಲಕ್ಷ ರೂ.ಗೆ ಖರೀದಿಸಿದ್ದರು. ಸೆಪ್ಟೆಂಬರ್ 2020 ಮತ್ತು ನವೆಂಬರ್ 2020 ರ ನಡುವೆ, ನಟ ನಾಲ್ಕು ಕಂತುಗಳಲ್ಲಿ 18.5 ಲಕ್ಷ ರೂ. ಅವರಿಗೆ ನೀಡಿದ್ದಾರೆ.




ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಕರಾರು ಪತ್ರವನ್ನೂ ಕಂಪನಿ ಮಾಡಿಕೊಟ್ಟಿತ್ತು. ಈ ನಡುವೆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿತ್ತು ಕಂಪನಿ. ಈ ಬಗ್ಗೆ ವಿಚಾರಿಸಿದಾಗ ಸ್ಪಂದಿಸಲಿಲ್ಲ ಹಾಗೂ ಮುಂಗಡ ಹಣವನ್ನು ಸಹ ವಾಪಸ್ ನೀಡಲಿಲ್ಲ ಎಂದು ವಂಚನೆ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.


ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ, 2019 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.



Comments


bottom of page