top of page

ನಂದಿನಿ ಉತ್ಪನ್ನಗಳ ರಾಯಭಾರಿ ಆದ ನಟ ಶಿವರಾಜ್​ಕುಮಾರ್

  • Writer: DoubleClickMedia
    DoubleClickMedia
  • Aug 1, 2023
  • 1 min read

Shivarajkumar

ಬೆಂಗಳೂರು, ಆಗಸ್ಟ್.1: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಉತ್ಪನ್ನಗಳಿಗೆ ನೂತನ ರಾಯಭಾರಿಯಾಗಿ 'ಹ್ಯಾಟ್ರಿಕ್ ಹೀರೋ' ಡಾ ಶಿವರಾಜ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.



ಕೆಎಂಎಫ್ ಉತ್ಪನ್ನಗಳಿಗೆ ರಾಯಭಾರಿ ಆಗುವಂತೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮತ್ತು ಎಂಡಿ ಜಗದೀಶ್ ಅವರು ಶಿವರಾಜ್‌ಕುಮಾರ್ ಅವರಿಗೆ ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ಶಿವಣ್ಣ, ಕೆಎಂಎಫ್ ರಾಯಭಾರಿ ಆಗಲು ಒಪ್ಪಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಮಂಗಳವಾರ ಶಿವರಾಜ್‌ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಮತ್ತು ಕೆಎಂಎಫ್‌ನ ಅಧಿಕಾರಿಗಳು, ಶಿವಣ್ಣ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.


"ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ಕೋರಿರುವ ಮೇರೆಗೆ ಕರ್ನಾಟಕ ರಾಜ್ಯದ ಹೆಮ್ಮೆಯ ಬ್ರಾಂಡ್ "ನಂದಿನಿ"ಯ ರಾಯಭಾರಿಯಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಚಾರದ ಕಾರ್ಯವನ್ನು ಕೈಗೊಳ್ಳಲು ಅವರು ಒಪ್ಪಿಕೊಂಡಿರುತ್ತಾರೆ. ನಂದಿನಿ" ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿಗೆ ಅಭಿನಂದನೆ ಸಲ್ಲಿಸಿ ಶುಭ ಕೊರಲಾಯಿತು. ಅವರಿಗೆ ಕರುನಾಡಿನ ಸಮಸ್ತ ರೈತ ಬಾಂಧವರ ಪರವಾಗಿ ಹಾಗೂ ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ಹೃತ್ಫೂರ್ವಕ ಅಭಿನಂದನೆಗಳು" ಎಂದು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಟ್ವೀಟ್ ಮಾಡಿದ್ದಾರೆ.



"ಈ ಹಿಂದೆ "ಕರ್ನಾಟಕ ರತ್ನ" ಡಾ.ಪುನೀತ್ ರಾಜ್‌ಕುಮಾರ್ ರವರು "ನಂದಿನಿ" ಬ್ರಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ದಶಕಗಳ ಹಿಂದಿನಂದಲೂ ಕರುನಾಡ ವರನಟರಾದ ಡಾ. ರಾಜ್‌ಕುಮಾರ್ ರವರು ಸಹ ಉಚಿತವಾಗಿ "ನಂದಿನಿ" ಬ್ರಾಂಡ್‌ಗೆ ರಾಯಭಾರಿ ಸೇವೆಯನ್ನು ಒದಗಿಸಿರುತ್ತಾರೆ. ಆನಾದಿ ಕಾಲದಿಂದಲೂ ಸಹ ಕರ್ನಾಟಕ ಪ್ರತಿಷ್ಠಿತ ಡಾ. ರಾಜ್‌ಕುಮಾರ್ ಕುಟುಂಬವು "ನಂದಿನಿ" ಬ್ರಾಂಡ್ ರಾಯಭಾರಿಯಾಗಿ ಪ್ರಚಾರವನ್ನು ಕೈಗೊಂಡು ರಾಜ್ಯದ ರೈತರ ಹಿತಾಸಕ್ತಿಯನ್ನು ಹೊಂದಿರುವುದು ಅಭಿನಂದನಾರ್ಹ ಸಂಗತಿ" ಎಂದು ಹೇಳಿದ್ದಾರೆ.








Kommentare


bottom of page