top of page

ವಾಯುಪಡೆಯ ಅಗ್ನಿವೀರ್‌ ನೇಮಕ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

  • Writer: DoubleClickMedia
    DoubleClickMedia
  • Jul 24, 2023
  • 1 min read

Agriveer

ಹೊಸದಿಲ್ಲಿ: ಭಾರತೀಯ ವಾಯುಪಡೆಯು 3,500 ಅಗ್ನಿವೀರರ ('ಅಗ್ನಿವೀರವಾಯು') ನೇಮಕಕ್ಕೆ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್‌ ಅರ್ಜಿಯನ್ನು ಆಹ್ವಾನಿಸಿದೆ.



ಆನ್‌ಲೈನ್‌ ನೋಂದಣಿ ಜು. 27ರಂದು ಪ್ರಾರಂಭವಾಗಲಿದ್ದು, ಆ. 17 ರಂದು ಕೊನೆಗೊಳ್ಳುತ್ತದೆ. 2023ರ ಅಕ್ಟೋಬರ್‌ 13 ರಿಂದ ಆಯ್ಕೆ ಪರೀಕ್ಷೆ ನಡೆಯಲಿದೆ. 27 ಜೂನ್‌ 2003 ಮತ್ತು 27 ಡಿಸೆಂಬರ್‌ 2006ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ತೇರ್ಗಡೆಯಾದರೆ, ದಾಖಲಾತಿಯ ದಿನಾಂಕದಂದು ಅವರ ಗರಿಷ್ಠ ವಯಸ್ಸಿನ ಮಿತಿ 21 ವರ್ಷ ದಾಟಿರಬಾರದು.



ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೋಂದಣಿಗೆ ಅರ್ಹರೆಂದು ವಾಯುಪಡೆ ಪರಿಗಣಿಸುತ್ತದೆ. ಅಲ್ಲದೆ, ಅಭ್ಯರ್ಥಿಗಳು ನಾಲ್ಕು ವರ್ಷಗಳ 'ಎಂಗೇಜ್‌ಮೆಂಟ್‌' ಅವಧಿಯವರೆಗೆ ಮದುವೆಯಾಗದಿರಲು ಬದ್ಧರಾಗಿರಬೇಕು.ವಾಯುಪಡೆ ಅಗ್ನಿವೀರವಾಯುವಿನ 'ಎಂಗೇಜ್‌ಮೆಂಟ್‌' ಅವಧಿಯು ತರಬೇತಿ, ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳು, ಪ್ರಾಯೋಗಿಕ ಮತ್ತು ರಚನಾತ್ಮಕ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಮದುವೆಯಾಗುವ ಅಗ್ನಿವೀರರನ್ನು ವಾಯು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ.



Comentarios


bottom of page