ಅಮುಲ್ ಗರ್ಲ್ ಸೃಷ್ಟಿಕರ್ತ ಸಿಲ್ವೆಸ್ಟರ್ ಡಾಕುನ್ಹಾ ವಿಧಿವಶ
- DoubleClickMedia
- Jun 22, 2023
- 1 min read

ಜಾಹೀರಾತು ವಲಯದಲ್ಲಿ ಸುಮಾರು 6 ದಶಕಗಳ ಕಾಲ ಕಾರ್ಯನಿರ್ವಹಿಸಿದ ಅಮುಲ್ ಗರ್ಲ್ ‘ಅಟ್ಟರ್ಲಿ ಬಟರ್ಲಿ‘ ಸೃಷ್ಟಿಕರ್ತ ಸಿಲ್ವೆಸ್ಟರ್ ಡಾಕುನ್ಹಾ ಅವರು ಅನಾರೋಗ್ಯದಿಂದ ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಸಿಲ್ವೆಸ್ಟರ್ ಡಾಕುನ್ಹಾ ನಿಧನಕ್ಕೆ ಖ್ಯಾತ ಉದ್ಯಮಿಗಳು ಮತ್ತು ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರು ಸಿಲ್ವೆಸ್ಟರ್ ಡಾಕುನ್ಹಾ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದು, ಡಾಕುನ್ಹಾ ಕಮ್ಯುನಿಕೇಷನ್ಸ್ ಅಧ್ಯಕ್ಷ ಸಿಲ್ವೆಸ್ಟರ್ ಡಾಕುನ್ಹಾ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ಇದನ್ನು ತಿಳಿಸಲು ತುಂಬಾ ದುಃಖವಾಗಿದೆ. ಅಮುಲ್ ಸಂಸ್ಥೆಯು ಈ ನಿಧನದ ದುಃಖದಲ್ಲಿ ಭಾಗಿಯಾಗಿದೆ ಎಂದು ಹೇಳಿದ್ದಾರೆ.
ಸಿಲ್ವೆಸ್ಟರ್ ಡಕುನ್ಹಾ ಅವರು 1966ರಲ್ಲಿ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಒಡೆತನದ ಅಮುಲ್ ಬ್ರಾಂಡ್‌ಗಾಗಿ 'ಅಟ್ಟರ್ಲಿ ಬಟರ್ಲಿ' ಎಂಬ ಜನಪ್ರಿಯ ಅಭಿಯಾನವನ್ನು ರೂಪಿಸಿದ್ದರು. ಇದರ ಮೂಲಕ 'ಅಮುಲ್ ಗರ್ಲ್' ಅನ್ನು ಜಗತ್ತಿಗೆ ಪರಿಚಯಿಸಿದ್ದರು. ಅಟ್ಟರ್ಲಿ ಬಟರ್ಲಿ’ ಮತ್ತು ಅಮುಲ್ ಗರ್ಲ್ ಅನ್ನು ಅಮುಲ್ ತನ್ನ ಬ್ರಾಂಡ್ ಜಾಹೀರಾತುಗಳಲ್ಲಿ ಸುಮಾರು 3 ದಶಕಗಳಿಂದ ಬಳಸಿಕೊಂಡಿದೆ. ಜಾಹಿರಾತು ಸೃಷ್ಠಿಯಾಗಿ ಹಲವಾರು ದಶಕಗಳು ಕಳೆದರೂ ಕೂಡ ಇಂದಿಗೂ ಅಮುಲ್‌ಗರ್ಲ್ ಮತ್ತು ಅಟ್ಟರ್ಲಿ ಬಟರ್ಲಿ ಎಂಬ ಪದವು ದೇಶದೆಲ್ಲೆಡೆ ಫೇಮಸ್ ಆಗಿದೆ.
‘ಸಿಲ್ವೆಸ್ಟರ್ ಡಾಕುನ್ಹಾ ಅವರ ಮಗ ರಾಹುಲ್ ಡಾಕುನ್ಹಾ ಈಗ ಅವರ ತಂದೆ ಪ್ರಾರಂಭಿಸಿದ ಜಾಹೀರಾತು ಏಜೆನ್ಸಿಯ ಅಧಿಕಾರವನ್ನು ವಹಿಸಿಕೊಂಡಿದ್ದು, ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
Comments