top of page

ಶಿವಮೊಗ್ಗದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆದ 8 ವರ್ಷದ ಬಾಲಕ

  • Writer: DoubleClickMedia
    DoubleClickMedia
  • Aug 17, 2023
  • 1 min read

Shivamogga

ಶಿವಮೊಗ್ಗ, ಆಗಸ್ಟ್ 17: ಶಿವಮೊಗ್ಗದಲ್ಲಿ 8 ವರ್ಷದ ಬಾಲಕನೊಬ್ಬ ಬುಧವಾರ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ.



1ನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಆಜಾನ್ ಖಾನ್‌ ಪೊಲೀಸ್ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿದಾಗ ಶಿವಮೊಗ್ಗದ ಎಸ್‌ಪಿ ಮಿಥುನ್ ಕುಮಾರ್ ಆತನಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಆಜಾನ್ ಖಾನ್ ಒಂದು ಗಂಟೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ.



ಎಂಟೂವರೆ ವರ್ಷ ಆಜಾನ್‌ಖಾನ್‌ಗೆ ಬೆಳೆದು ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಬೇಕೆಂಬ ಕನಸು. ಆದರೆ, ಹುಟ್ಟಿದ ಮೂರು ತಿಂಗಳಿಂದ ಶುರುವಾದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆತನ ಹೃದಯ ಸರಿಯಾಗಿ ಬೆಳೆದಿಲ್ಲ. 10 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಸಮಸ್ಯೆ ಇದಾಗಿದೆ. ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆತನ ಕನಸನ್ನು ಶಿವಮೊಗ್ಗದ ಪೊಲೀಸರು ಸಾಕಾರಗೊಳಿಸಿದರು.



ಆಜಾನ್ ಖಾನ್‌ ಮೂಲತಃ ಬಾಳೆಹೊನ್ನೂರುನವನು. ಪ್ರಸ್ತುತ ಶಿವಮೊಗ್ಗ ನಗರದ ಸೂಳೆಬೈಲು ನಿವಾಸಿ. ಬಾಲಕನ ಮತ್ತು ಆತನ ಪೋಷಕರ ಕೋರಿಕೆಯಂತೆ ಆಗಸ್ಟ್ 16ರ ಬುಧವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ನೀಡಲಾಯಿತು.




Comments


bottom of page