ಅಕ್ರಮವಾಗಿ ಭಾರತ ಪ್ರವೇಶಿಸಿದ ಇಬ್ಬರು ಚೀನಾ ಪ್ರಜೆಗಳ ಬಂಧನ
- DoubleClickMedia
- Jul 24, 2023
- 1 min read

ಅಧಿಕೃತ ದಾಖಲೆಗಳಿಲ್ಲದೆ ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಚೀನಾದ ಪ್ರಜೆಗಳನ್ನು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ರಕ್ಸಾಲ್ ಗಡಿ ಹೊರಠಾಣೆಯಲ್ಲಿ ಶನಿವಾರ ರಾತ್ರಿ ಬಂಧನ ನಡೆದಿದ್ದು, ಸಹಾಯಕ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ಎಸ್‌ಕೆ ಸಿಂಗ್ ಉಪಸ್ಥಿತರಿದ್ದರು. ವಿಚಾರಣೆಯ ಸಮಯದಲ್ಲಿ, ವ್ಯಕ್ತಿಗಳನ್ನು ಚೀನಾದ ಜಾವೊಕ್ಸಿಂಗ್ ಪ್ರಾಂತ್ಯದ ಝಾವೋ ಜಿಂಗ್ ಮತ್ತು ಫೂ ಕಾನ್ ಎಂದು ಗುರುತಿಸಲಾಗಿದೆ.
ಈ ಇಬ್ಬರು ಸರಿಯಾದ ದಾಖಲೆಗಳನ್ನು ಹೊಂದಿಲ್ಲದೇ ಗಡಿಯೊಳಗೆ ಪ್ರವೇಶಿಸಿದ್ದು, ತಮ್ಮ ಪಾಸ್‌ಪೋರ್ಟ್ ಗಳು ತಾವು ತಂಗಿದ್ದ ಗಡಿಯಾಚೆಗಿನ ಬೀರ್‌ಗಂಜ್ ನಲ್ಲಿನ ಹೋಟೇಲಿನಲ್ಲಿವೆ ಎಂದು ಹೇಳಿಕೊಂಡಿದ್ದಾರೆ. ಚೀನೀ ಪ್ರಜೆಗಳು ಆಟೋರಿಕ್ಷಾದ ಮೂಲಕ ಗಡಿಗೆ ಆಗಮಿಸಿದರು ಮತ್ತು ಕಾಲ್ನಡಿಗೆಯಲ್ಲಿ ಗಡಿ ದಾಟಲು ಪ್ರಯತ್ನಿಸಿದರು ಎಂದು ಸಿಂಗ್ ಬಹಿರಂಗಪಡಿಸಿದ್ದಾರೆ.
ಸೂಕ್ತ ದಾಖಲೆಗಳಿಲ್ಲದೆ ಭಾರತ ಪ್ರವೇಶಿಸಲು ಇವರು ಈ ಹಿಂದೆಯೂ ಪ್ರಯತ್ನಿಸಿರುವುದಾಗಿ ತಿಳಿದು ಬಂದಿದೆ. ಜುಲೈ 2 ರಂದು, ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದು ಇದು ಉದ್ದೇಶಪೂರ್ವಕವಲ್ಲ ಎಂದು ಆಗ ಹೇಳಿಕೊಂಡಿದ್ದರು. ಆದಾಗ್ಯೂ, ಆ ಸಮಯದಲ್ಲಿ, ಅವರ ಪಾಸ್‌ಪೋರ್ಟ್‌ಗಳಲ್ಲಿ "ಪ್ರವೇಶ ನಿರಾಕರಿಸಲಾಗಿದೆ" ಎಂದು ಸ್ಟ್ಯಾಂಪ್ ಮಾಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಸರಿಯಾದ ದಾಖಲಾತಿಗಳಿಲ್ಲದೆ ಅವರು ಪ್ರದೇಶಕ್ಕೆ ಪ್ರವೇಶಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದರಿಂದ, ಅಧಿಕಾರಿಗಳು ಅನುಮಾನಗೊಂಡು ಮುಂದಿನ ತನಿಖೆ ಮತ್ತು ಸೂಕ್ತ ಕ್ರಮಕ್ಕಾಗಿ ಅವರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
Comments