top of page

ಪ್ರವಾಸಿಗರ ಗಮನಕ್ಕೆ: ಇಂದಿನಿಂದ ಕೊಡಚಾದ್ರಿಗೆ ಪ್ರವೇಶ ನಿಷೇಧ

  • Writer: DoubleClickMedia
    DoubleClickMedia
  • Jul 30, 2023
  • 1 min read

Kodachadhri

ಶಿವಮೊಗ್ಗ, ಜು 30: ಮುಂಗಾರು ಮಳೆ ಹಿನ್ನೆಲೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ಕೇಂದ್ರ ಹಾಗೂ ಭಕ್ತರ ಶ್ರದ್ಧಾಕೇಂದ್ರ ಕೊಡಚಾದ್ರಿ ಗಿರಿಗೆ ಜುಲೈ 30ರಿಂದ ಮುಂದಿನ ಆದೇಶದವರೆಗೆ ವಾಹನದಲ್ಲಿ ತೆರಳುವುದು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರವಾಸಿ ತಾಣ ಕೊಡಚಾದ್ರಿಗೆ ಕಟ್ಟಿನಹೊಳೆ ಮೂಲಕ ತೆರಳುವ ವಾಹನ ಹಾಗೂ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ.



ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ವಿಪರೀತ ಮಳೆಯಲ್ಲಿ ಮಲೆನಾಡು ವ್ಯಾಪ್ತಿಯ ಪ್ರವಾಸ ತೀರಾ ಅಸುರಕ್ಷತೆಯಿಂದ ಕೂಡಿದ್ದು, ಸುರಕ್ಷತೆಯಿಂದ ದೃಷ್ಟಿಯಿಂದ ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ಜೀಪ್‌ ಮುಂತಾದ ವಾಹನಗಳು ಹಾಗೂ ವಿವಿಧ ಮಾರ್ಗದ ಮೂಲಕ ಚಾರಣದಲ್ಲಿ ಕೊಡಚಾದ್ರಿಗೆ ತೆರಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.




Comentarios


bottom of page