top of page
  • Writer's pictureDoubleClickMedia

ಬಂಟ್ವಾಳದ ನಂದಾವರದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಸಾವು


Bantavala

ಮಂಗಳೂರು ಜು.7 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮೂರುದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಸಮೀಪವಿದ್ದ ಗುಡ್ಡ ಮನೆಯ ಮೇಲೆ ಕುಸಿದು ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ನಡೆದಿದೆ.



ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ವಾಸ್ತವಿರುವ ಮಹಮ್ಮದ್ ಎಂಬುವರ ಮನೆಗೆ ಇಂದು ಬೆಳಗಿನ ಜಾವ ಗುಡ್ಡ ಕುಸಿದು ಬಿದ್ದು ಮನೆಯಲ್ಲಿ ವಾಸ್ತವ್ಯವಿದ್ದ ಮಹಮ್ಮದ್ ರವರ ಪತ್ನಿ 49 ವರ್ಷ ಪ್ರಾಯದ ಝರಿನ ಹಾಗೂ ಮಗಳಾದ 20 ವರ್ಷ ಪ್ರಾಯದ ಶಫಾ ಎಂಬುವರು ಮನೆಯೊಳಗೆ ಸಿಕ್ಕಿಕೊಂಡಿದ್ದರು. ಅದರಲ್ಲಿ ಶಫಾರವರನ್ನು ಕೂಡಲೇ ರಕ್ಷಣೆ ಮಾಡಲಾಗಿದೆ. ಆದ್ರೆ ದುರಾದೃಷ್ಟವಶಾತ್‌ ಝರೀನಾ ಮೃತಪಟ್ಟಿದ್ದಾರೆ.



ಗಂಭೀರ ಸ್ಥಿತಿಯಲ್ಲಿರುವ ಝರೀನಾ (49) ಎಂಬವರನ್ನು ರಕ್ಷಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಸಾವನ್ನಪ್ಪಿರುವುದಾಗಿ ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.


ಸ್ಥಳದಲ್ಲಿ ಅಗ್ನಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳು ತಹಶಿಲ್ದಾರ್ ಎಸ್.ಬಿ.ಕೂಡಲಗಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಸ್ಥಳೀಯರ ನೆರವಿನಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿತ್ತು.



Комментарии


bottom of page