top of page

ಕೋಝಿಕ್ಕೋಡ್‌ನಲ್ಲಿ ಮೃತ ಮಗನ ಶರೀರವನ್ನು ಮೂರು ದಿನಗಳ ಕಾಲ ಇಟ್ಟುಕೊಂಡ ಮಹಿಳೆ

  • Writer: DoubleClickMedia
    DoubleClickMedia
  • Jun 17, 2023
  • 1 min read

ಕೋಝಿಕ್ಕೋಡ್, ಜೂನ್ 17, 2023: ಮೃತಪಟ್ಟ ಮಗನ ಶವದ ಜೊತೆ ಮಹಿಳೆಯೊಬ್ಬಳು ಸುಮಾರು ಮೂರು ದಿನಗಳ ಕಾಲ ಇದ್ದ ಆಘಾತಕಾರಿ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ. ರಮೇಶ ಎಂಬಾತನ ಶವವು ನಾದಪುರಂನ ವಲಯಂನಲ್ಲಿರುವ ನಿವಾಸದಲ್ಲಿ ಶನಿವಾರ ಪತ್ತೆಯಾಗಿದ್ದು ಆತನ ತಾಯಿ ಶವದ ಹತ್ತಿರ ಕುಳಿತಿದ್ದಳು ಎಂದು ತಿಳಿದುಬಂದಿದೆ. ತಾಯಿಯು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದಾಗಿ ವರದಿಯಾಗಿದೆ. ಇತ್ತೀಚಿಗೆ ತಾಯಿ ಮಗ ಪರಸ್ಪರ ಮಾತನಾಡುತ್ತಿರಲಿಲ್ಲವೆಂದೂ ತಿಳಿದುಬಂದಿದೆ.


crime

ಪಿಂಚಣಿ ನೀಡಲು ಆಗಮಿಸಿದ್ದ ಬ್ಯಾಂಕ್‌ ನೌಕರರು ಆವರಣದಲ್ಲಿ ದುರ್ವಾಸನೆ ಬೀರುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ವಲಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸುಮಾರು ಮೂರು ದಿನಗಳ ಕಾಲ ಮೃತದೇಹವನ್ನು ಹಾಗೇ ಇಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.



ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.



Comments


bottom of page