ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು
- DoubleClickMedia
- Aug 1, 2023
- 1 min read

ಚಿಕ್ಕಮಗಳೂರು, ಆ 1: ಕರ್ನಾಟಕದಿಂದ ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದವರೊಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಗಿರೀಶ್ ( 25) ಮೃತಪಟ್ಟ ಯುವಕ.
ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ಕೇದಾರನಾಥ ಯಾತ್ರೆಗೆ ತೆರಳಿದ್ದಾರೆ. ಅದರಂತೆ, ಕಳೆದ ವಾರ ಗಿರೀಶ್ ಕೂಡ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆ ಕೈಗೊಂಡಿದ್ದರು.
ಹವಾಮಾನದ ವೈಪರ್ಯತೆ ಹಾಗೂ ಪ್ರಯಾಣ ಆಯಾಸ ಕಾರಣಗಳಿಂದ ಗಿರೀಶ್ ಕೇದಾರನಾಥದಲ್ಲಿ ಅಸ್ವಸ್ಥಗೊಂಡಿದ್ದರು. ದುರಾದೃಷ್ಟವಶಾತ್ ಗಿರೀಶ್ ಕೇದಾರನಾಥದಲ್ಲಿಯೇ ಸಾವನ್ನಪ್ಪಿದ್ದಾರೆ.
ಸದ್ಯ ಗಿರೀಶ್ ಅವರ ಮೃತ ದೇಹವನ್ನು ರಿಷಿಕೇಶ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಘಟನೆ ಬಗ್ಗೆ ಗಿರೀಶ್ ಕುಟುಂಬಸ್ಥರಿಗೆ ಕೇದಾರನಾಥ ಪೊಲೀಸರು ಮಾಹಿತಿ ನೀಡಿದ್ದಾರೆ.
ಗಿರೀಶ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದರು.
Comments