top of page
  • Writer's pictureDoubleClickMedia

ಟ್ವಿಟರ್​ನಲ್ಲಿ ಬ್ಲ್ಯೂ ಟಿಕ್ ಕಳೆದುಕೊಂಡ ಬಿಸಿಸಿಐ


BCCI

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ದೇಶವಾಸಿಗಳಿಗೆ ಕೊಟ್ಟಿರುವ ಕರೆಗೆ ಓಗೊಟ್ಟ ಬಿಸಿಸಿಐ ಏಷ್ಯಾಕಪ್​ಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಧಿಕೃತ ಖಾತೆಯಾದ ಟ್ವಿಟರ್​ನಲ್ಲಿ ಬ್ಯ್ಲೂ ಟಿಕ್ ಕಳೆದುಕೊಂಡಿದೆ.



ಪ್ರಧಾನಿ ಮೋದಿಯವರು ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಅಭಿಯಾನ ಆರಂಭಿಸಿದ್ದು, ಈ ಅಭಿಯಾನದಡಿ ಪ್ರತಿಯೊಬ್ಬ ಭಾರತೀಯರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಫೋಟೋವನ್ನಾಗಿ ಇರಿಸಲು ಮನವಿ ಮಾಡಿದ್ದರು. ಹಾಗಾಗಿ ಪ್ರಧಾನಿ ಮೋದಿಯವರ ಕರೆಗೆ ಬೆಂಬಲ ಸೂಚಿಸಿದ ಬಿಸಿಸಿಐ ತನ್ನ ಪ್ರೊಫೈಲ್ ಫೋಟೋವನ್ನು ಬದಲಾಯಿಸಿತ್ತು. ಹೀಗಾಗಿ ಟ್ವಿಟರ್ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಬಿಸಿಸಿಐಗೆ ಈ ಹಿಂದೆ ನೀಡಿದ ಬ್ಲ್ಯೂಟಿಕ್ ಅನ್ನು ಟ್ವಿಟರ್ ತೆಗೆದುಹಾಕಿದೆ.



ಹೊಸ ನೀತಿಯ ಪ್ರಕಾರ, ಬ್ಯ್ಲೂ ಟಿಕ್ ಪಡೆದುಕೊಂಡಿರುವ ಟ್ವಿಟರ್ ಖಾತೆಯ ಬಳಕೆದಾರರು ತಮ್ಮ ಖಾತೆಯಲ್ಲಿ ಸೇರಿಸುವ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಪ್ರೊಫೈಲ್ ಹೆಸರು, ಪ್ರೊಫೈಲ್ ಫೋಟೋವನ್ನು ಬದಲಾಯಿಸಿದರೆ ನೀಲಿ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ. ಅಲ್ಲದೆ, ಅಧಿಕೃತ ಬಳಕೆದಾರರ ಟ್ವಿಟರ್ ಖಾತೆ ಆರು ತಿಂಗಳವರೆಗೆ ಸಕ್ರಿಯವಾಗಿಲ್ಲದಿದ್ದರೆ, ಆ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ. ಈ ಕಾರಣದಿಂದಾಗಿ ಇದೀಗ ತನ್ನ ಪ್ರೊಫೈಲ್ ಫೋಟೋವನ್ನು ತ್ರಿವಣ ಧ್ವಜಕ್ಕೆ ಬದಲಿಸಿರುವ ಬಿಸಿಸಿಐನ ಬ್ಲೂ ಟಿಕ್ ಅನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.



ತಿರಂಗ್‌ ಅಭಿಯಾನದಡಿಯಲ್ಲಿ ಬಿಸಿಸಿಐ, ಪುರುಷ, ಮಹಿಳಾ ಮತ್ತು ದೇಶೀಯ ಕ್ರಿಕೆಟ್‌ನ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದೆ. ಹೀಗಾಗಿ ಈ ಮೂರು ಖಾತೆಗಳ ನೀಲಿ ಟಿಕ್ ಅನ್ನು ತೆಗೆದುಹಾಕಲಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಈ ಬ್ಲ್ಯೂಟಿಕ್ ಮತ್ತೆ ಬಿಸಿಸಿಐ ಖಾತೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದೆ.




Comentários


bottom of page