ಬೆಂಗಳೂರು: ಪ್ರಿಸ್ಕೂಲ್‌ನಲ್ಲಿ ಕಂದಮ್ಮಗಳ ಹೊಡೆದಾಟ, ವೀಡಿಯೋ ವೈರಲ್
- DoubleClickMedia
- Jun 23, 2023
- 1 min read
ಬೆಂಗಳೂರು, ಜೂನ್ 23, 2023: ಬೆಂಗಳೂರಿನ ಮಾಂಟೆಸ್ಸರಿ ಪ್ರಿಸ್ಕೂಲ್‌ನಲ್ಲಿ ಪುಟಾಣಿಗಳ ಹೊಡೆದಾಟ ಇದೀಗ ವೈರಲ್ ಆಗಿದೆ. ವೀಡಿಯೋದಲ್ಲಿ ಮಗುವೊಂದು ತನಗಿಂತ ಸಣ್ಣ ವಯಸ್ಸಿನ ಕಂದಮ್ಮಗಳನ್ನು ನೆಲಕ್ಕೆ ಉರುಳಿಸಿ ಹೊಡೆಯುವುದು ಕಂಡುಬಂದಿದೆ. ಇದಕ್ಕೂ ಮುನ್ನ, ಮಹಿಳೆಯೊಬ್ಬಳು ಮಗುವೊಂದನ್ನು ಹೊರಗೆ ಕರೆದುಕೊಂಡು ಹೋಗಿದ್ದು, ನಂತರ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ.
ಸುಮಾರು ಹೊತ್ತು ಮಕ್ಕಳು ಜಗಳವಾಡುತ್ತಿದ್ದರೂ ಇದು ಶಾಲಾ ಸಿಬ್ಬಂದಿಗಳ ಗಮನಕ್ಕೆ ಬರಲೇ ಇಲ್ಲ. ಸಣ್ಣ ಮಕ್ಕಳನ್ನು ನಿಗಾವಹಿಸದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಜನಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆದ ಬಳಿಕ ಬೆಂಗಳೂರು ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಿಟಿಜನ್ಸ್ ಮೂವ್ ಮೆಂಟ್, ಈಸ್ಟ್ ಬೆಂಗಳೂರು ಎನ್ನುವ ಖಾತೆಯಿಂದ ವೀಡಿಯೋವನ್ನು ಟ್ವೀಟ್ ಮಾಡಲಾಗಿದ್ದು, ’ಮುಚ್ಚಿದ ಕೋಣೆಯಲ್ಲಿ ಅಂಬೆಗಾಲಿಡುವ ಮಕ್ಕಳನ್ನು ನಿಗಾವಹಿಸದೆ ಬಿಟ್ಟಿರುವ ಪ್ರಿಸ್ಕೂಲ್‌ನ ಕಳವಳಕಾರಿ ವೀಡಿಯೊವನ್ನು ನಾವು ಸ್ವೀಕರಿಸಿದ್ದೇವೆ. ಹಿರಿಯ ಮಗುವೊಂದು ಕಿರಿಯ ಮಗುವಿಗೆ ಪದೇ ಪದೇ ಹೊಡೆಯುತ್ತಿರುವುದನ್ನು ಇದರಲ್ಲಿ ಕಾಣಬಹುದು. ಶಾಲೆಯ ಹೆಸರು ಟೆಂಡರ್‌ಫೂಟ್, ಚಿಕ್ಕಲಸಂದ್ರ, ಬೆಂಗಳೂರು- 560061. ದಯವಿಟ್ಟು ನಿಮ್ಮ ಮಗುವನ್ನು ಅಲ್ಲಿಗೆ ಕಳುಹಿಸಬೇಡಿ!’ ಎಂಬ ಒಕ್ಕಣೆಯಿದೆ.
Comentarios