top of page
  • Writer's pictureDoubleClickMedia

ಆಂಧ್ರ ಕಡಲತೀರದಲ್ಲಿ ನೀಲಿ ತಿಮಿಂಗಿಲ ಪತ್ತೆ: ವಿಡಿಯೋ ವೈರಲ್‌


blue whale

ವಿಶಾಖಪಟ್ಟಣಂ ಜು.28 : ಇಲ್ಲಿನ ಶ್ರೀಕಾಕುಳಂನ ಕಡಲತೀರದ ದಡದಲ್ಲಿ ಸಾವನ್ನಪ್ಪಿರೋ ನೀಲಿ ತಿಮಿಂಗಿಲವೊಂದು ಪತ್ತೆಯಾಗಿದೆ. ತಿಮಿಂಗಿಲವು ಸುಮಾರು 25 ಅಡಿ ಉದ್ದ ಮತ್ತು ಐದು ಟನ್ ತೂಕವಿದೆ. ಈ ದೃಶ್ಯದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ನೀಲಿ ತಿಮಿಂಗಿಲ ನೋಡಲು ಸಮೀಪದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕುತೂಹಲದಿಂದ ನೋಡುಗರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂತು.




ಕಡಲತೀರದಲ್ಲಿ ತಿಮಿಂಗಿಲದ ಸಾವಿಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಆಳವಿಲ್ಲದ ನೀರಿನಲ್ಲಿ ಸಿಲುಕಿ ತಿಮಿಂಗಿಲ ಮೃತಪಟ್ಟಿರಬಹುದು ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ.



ದಕ್ಷಿಣ ರಾಜ್ಯದ ಕಡಲತೀರದಲ್ಲಿ ನೀಲಿ ತಿಮಿಂಗಿಲವು ಸಿಕ್ಕಿಹಾಕಿಕೊಳ್ಳುವುದು ಅಪರೂಪ. ರೂಪವಿಜ್ಞಾನದ ಗುಣಲಕ್ಷಣಗಳು ಮತ್ತು ಕೆಲವು ಗುರುತುಗಳ ಆಧಾರದ ಮೇಲೆ, ಇದು ಬ್ರೈಡ್‌ನ ತಿಮಿಂಗಿಲ ಎಂದು ನಿರ್ಧರಿಸಲಾಗಿದೆ ಎಂದು ಅರಣ್ಯಗಳ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಶಾಂತಿ ಪ್ರಿಯಾ ಪಾಂಡೆ ತಿಳಿಸಿದ್ದಾರೆ.




Comments


bottom of page