ತೌಡುಗೋಳಿ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಗುದ್ದಿದ ಕಾರು
- DoubleClickMedia
- Jun 20, 2023
- 1 min read

ಮಂಗಳೂರು, ಜೂ.19- ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸ್‌ನಲ್ಲಿ
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸಮೀಪದ ಬಸ್ ನಿಲ್ದಾಣಕ್ಕೆ ಅಪ್ಪಳಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಅಪಘಾತದಲ್ಲಿ ಸ್ಕೂಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಡಿಕ್ಕಿಯ ರಭಸಕ್ಕೆ ಬಸ್ ನಿಲ್ದಾಣದ ಮುಂಭಾಗದ ಸಣ್ಣ ಗೋಡೆ ಕುಸಿದು ಬಿದ್ದಿದೆ. ಬಸ್ ನಿಲ್ದಾಣದಲ್ಲಿದ್ದ ಇಬ್ಬರು ಮಹಿಳೆಯರು ಕಾರು ತಮ್ಮ ಬಳಿಗೆ ಬರುತ್ತಿದ್ದಂತೆ ದಿಕ್ಕು ತೋಚದೆ ಮೂಲೆಯಲ್ಲಿ ನಿಂತಿದ್ದರಿಂದಾಗಿ ಅನಾಹುತದಿಂದ ಪಾರಾಗಿದ್ದಾರೆ .
ಘಟನೆಗೆ ಒಳಗಾದ ಕಾರು ನರಿಂಗಾನ ಗ್ರಾಮದ ಶಾಂತಿಪಾಲಿಕೆ ನಿವಾಸಿ ಅಶ್ರಫ್ ಎಂಬುವರಿಗೆ ಸೇರಿದ್ದಾಗಿದೆ. ಅಶ್ರಫ್ ಇತ್ತೀಚೆಗಷ್ಟೇ ವಿದೇಶದಿಂದ ವಾಪಸ್ಸಾಗಿದ್ದು, ಅಂದು ಬೆಳಗ್ಗೆ ಬೆಂಗಳೂರಿನಿಂದ ಮನೆಗೆ ತೆರಳುತ್ತಿದ್ದರು. ಅಪಘಾತದ ವೇಳೆ ಅವರ ಸಂಬಂಧಿಯೇ ಕಾರು ಚಲಾಯಿಸುತ್ತಿದ್ದರು.
ಅದೃಷ್ಟವಶಾತ್, ಅಶ್ರಫ್ ಮತ್ತು ಅವರ ಸಂಬಂಧಿ ಇಬ್ಬರೂ ಘಟನೆಯಿಂದ ಪಾರಾಗಿದ್ದಾರೆ
Commenti