ಗೊಲ್ಲರಹಟ್ಟಿಯಲ್ಲಿ ಮೌಢ್ಯಕ್ಕೆ ಮಗು ಬಲಿ ಪ್ರಕರಣ: ಎಫ್ಐಆರ್ ದಾಖಲು
- DoubleClickMedia
- Jul 28, 2023
- 1 min read

ತುಮಕೂರು, ಜು 28 : ಕಾಡುಗೊಲ್ಲ ಸಮುದಾಯದ ಮೌಢ್ಯಕ್ಕೆ ಒಂದು ತಿಂಗಳ ಮಗು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ವಸಂತಾ ಪತಿ ಸಿದ್ದೇಶ್, ಮಾವ ಚಿಕ್ಕಹುಲಿಯಪ್ಪ, ಸಿದ್ದೇಶ್ ಕುಟುಂಬ ಹಾಗೂ ಸಮುದಾಯದ ಮುಖಂಡರ ವಿರುದ್ಧ ಕೋರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತುಮಕೂರು ತಾಲೂಕಿನ ಮಲ್ಲೇನಹಳ್ಳಿ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಮೌಢ್ಯ ಇನ್ನೂ ಜೀವಂತವಾಗಿದೆ. ವಸಂತಾ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅವಳಿ ಶಿಶುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭದಲ್ಲಿ ಗಂಡು ಮಗು ಸಾವನ್ನಪ್ಪಿದ್ದು, ಹೆಣ್ಣು ಮಗು ಆರೋಗ್ಯವಾಗಿತ್ತು. ಹೆರಿಗೆ ಮುಗಿಸಿ ವಾಪಸ್ ಗ್ರಾಮಕ್ಕೆ ಬಂದ ವಸಂತಾರಿಗೆ ಕಾಡುಗೊಲ್ಲ ಸಮುದಾಯದ ಮುಖಂಡರು ನಮ್ಮ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗಲ್ಲ ಹೀಗಾಗಿ ನಾವು ಗ್ರಾಮದೊಳಗೆ ಬಿಟ್ಟುಕೊಳ್ಳುವುದಿಲ್ಲ, ಸೂತಕದ ಬಾಣಂತಿ ಊರ ಒಳಗೆ ಬಂದರೇ ಕೇಡು, ಎಂದು ಊರಾಚೆಯ ಜಮೀನಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಗುಡಿಸಿಲಿನಲ್ಲಿ ಏಕಾಂಗಿಯಾಗಿ ವಾಸ ಮಾಡುವಂತೆ ಆದೇಶ ನೀಡಿದ್ದರು. ಆದರೆ, ನಿರಂತರ ಮಳೆಯಿಂದ ವಾತಾವರಣ ಥಂಡಿಯಾಗಿದ್ದು, ವಿಪರೀತ ಶೀತದಿಂದ ಬಳಲಿದ ಮಗು ಮೃತಪಟ್ಟಿದೆ.
Commenti