top of page

ತುಳು ಚಿತ್ರರಂಗದಲ್ಲಿ ದಾಖಲೆ ಬರೆದ ಸರ್ಕಸ್‌

  • Writer: DoubleClickMedia
    DoubleClickMedia
  • Jun 24, 2023
  • 1 min read


Roopesh Shetty


ಬಿಗ್​ಬಾಸ್ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿ ನಟನೆಯ ಹೊಸ ಸಿನಿಮಾ ಸರ್ಕಸ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ತುಳು ಚಿತ್ರರಂಗದಲ್ಲಿ ದಾಖಲೆಯನ್ನು ಬರೆದಿದೆ. ಬಿಡುಗಡೆಯಾದ ಮೊದಲ ದಿನವೇ ಅತಿ ಹೆಚ್ಚು ಜನ ನೋಡಿದ ಮತ್ತು ಅತಿ ಹೆಚ್ಚು ಕಲೆಕ್ಷನ್ ಮಾಡಿದ ತುಳು ಸಿನಿಮಾ ಎಂಬ ಖ್ಯಾತಿಯನ್ನು ಸರ್ಕಸ್‌ ಸಿನಿಮಾ ಪಡೆದುಕೊಂಡಿದೆ.



ಶುಕ್ರವಾರವಷ್ಟೇ ರೂಪೇಶ್ ಶೆಟ್ಟಿ ನಟನೆಯ ಸರ್ಕಸ್ ಸಿನಿಮಾ ಕರಾವಳಿ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಹಾಗೆಯೇ ದುಬೈ, ಬಹ್ರೆಸ್ ಸೇರಿದಂತೆ ಕೆಲವು ಗಲ್ಫ್ ದೇಶಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆಯಾದ ದಿನವೇ ಸರ್ಕಸ್‌ ಸಿನಿಮಾವನ್ನು 12500 ಮಂದಿ ನೋಡಿದ್ದು, ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ.ಈ ಸಿನಿಮಾವನ್ನು ರೂಪೇಶ್ ಶೆಟ್ಟಿ ಜೂನ್ 30ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.



ಜೂನ್ 23ರಂದು ಸಿನಿಮಾ ಬಿಡುಗಡೆ ಆಗುವ ಮುನ್ನ ಸಿನಿಮಾದ 51 ವಿಶೇಷ ಪ್ರದರ್ಶನಗಳನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ರೂಪೇಶ್ ಶೆಟ್ಟಿ ಆಯೋಜಿಸಿದ್ದರು. ಸಿನಿಮಾ ನೋಡಿದ ತುಳು ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ವಿದೇಶಗಳಲ್ಲಿಯೂ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.



ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ತಮ್ಮ ಖುಷಿ ಹಂಚಿಕೊಂಡಿರುವ ರೂಪೇಶ್ ಶೆಟ್ಟಿ, ”ಸರ್ಕಸ್ ಈ ರೇಂಜ್ಗೆ ಹಿಟ್ ಆಗತ್ತೆ ಎಂದು ಭಾವಿಸಿರಲಿಲ್ಲ. ತುಳು ಚಿತ್ರರಂಗದಲ್ಲಿ ಈ ಚಿತ್ರ ದಾಖಲೆ ಬರೆದಿದೆ. ಮೊದಲ ದಿನ 12,500 ಜನರು ಈ ಚಿತ್ರ ನೋಡಿದ್ದಾರೆ. ತುಳು ಚಿತ್ರರಂಗದ ದೊಡ್ಡ ಓಪನಿಂಗ್ ಪಡೆದ ಸಿನಿಮಾ. ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದೆ. ಈ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ ಜೊತೆಗೆ ಕೆಲವು ಮನವಿಗಳನ್ನೂ ಮಾಡಿದ್ದು, ”ಎಲ್ಲರೂ ಮೊದಲ ವಾರವೇ ಸಿನಿಮಾವನ್ನು ನೋಡಿ. ಎರಡನೇ ವಾರ ನಿರ್ಮಾಪಕರಿಗೆ ಬರುವ ಲಾಭಾಂಶ ಕಡಿಮೆ ಆಗುತ್ತದೆ. ಹಾಗೂ ಸಿನಿಮಾ ನೋಡುವ ವೇಳೆ ಯಾರೂ ಸಹ ಚಿತ್ರಮಂದಿರದಿಂದ ಲೈವ್ ಮಾಡಬೇಡಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ.



Comments


bottom of page