top of page
  • Writer's pictureDoubleClickMedia

ದುಬಾರಿ ದುನಿಯಾ: ಇಂದಿನಿಂದ ಹೋಟೆಲ್‌ಗಳಲ್ಲಿ ಕಾಫಿ-ಟೀ, ಊಟ, ತಿಂಡಿ ಬೆಲೆ ಹೆಚ್ಚಳ


Hotel Food

ಬೆಂಗಳೂರು, ಆ, 1: ಹಾಲಿನ ದರ ಏರಿಕೆ, ಟೊಮೆಟೊ ಸೇರಿದಂತೆ ಹಲವು ತರಕಾರಿಗಳು, ವಿದ್ಯುತ್‌, ದಿನಸಿ ಮತ್ತಿತರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಹೋಟೆಲ್‌ಗಳಲ್ಲಿ ತಿಂಡಿ, ಊಟ, ಕಾಫಿ - ಟೀ ದರ ಏರಿಕೆ ಮಾಡಲಾಗಿದೆ.



ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಈಗ ಏಕಾಏಕಿ ಡಬಲ್ ಆಗಿದ್ದು ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 140-160 ರೂ. ಇದೆ. ಇನ್ನು ಇಂದಿನಿಂದ ನಂದಿನಿ ಹಾಲಿನ ಮೇಲೆ ಮೂರು ರೂಪಾಯಿ ದರ ಏರಿಕೆಯಾಗಿದೆ. ಇದರಿಂದ ಹೋಟೆಲ್ ಊಟ ತಿಂಡಿ ಕಾಫಿ‌ ಟೀ ಮೇಲೆ ಹತ್ತರಷ್ಟು ದರ ಏರಿಕೆಯಾಗ್ತಿದೆ.


ಟೋನ್ಡ್‌ ಹಾಲು ಈ ಹಿಂದೆ ಲೀಟರ್‌ಗೆ 39 ರೂಪಾಯಿಗಳಾಗಿದ್ದು, ಇದೀಗ 47 ರೂಪಾಯಿ ಆಗಿದೆ. ಹೋಮೋಜಿನೈಸ್ಡ್‌ ಹಾಲಿನ ಬೆಲೆ 43 ರೂಪಾಯಿ ಆಗಿದೆ. ಹಸುವಿನ ಹಾಲಿನ ಗ್ರೀನ್‌ ಪ್ಯಾಕೆಟ್‌ ಬೆಲೆ 46 ರೂಪಾಯಿ ಆಗಿದೆ. ಮೊಸರು ಪ್ರತಿ ಲೀಟರ್‌ಗೆ 50 ರೂಪಾಯಿ ಆಗಿದೆ.



ಊಟ, ತಿಂಡಿ, ಕಾಫಿ - ಟೀ ದರದಲ್ಲಿ ಶೇ. 10ರಷ್ಟು ಏರಿಕೆ ಮಾಡಲಾಗಿದ್ದು, ಕೆಲವೊಂದು ಹೋಟೆಲ್‌ಗಳಲ್ಲಿ ಪೂರಿ ಒಂದು ಪ್ಲೇಟ್‌ಗೆ 50 ರೂ. ನಿಂದ 60 - 65 ರೂ.ಗೆ ಏರಿಕೆಯಾಗಿದೆ. ಇಡ್ಲಿ ವಡೆ 60 - 65 ರೂ., ಕಾಫಿ - ಟೀ 18 - 20 ರೂ. ತಲುಪಿದೆ. ರೈಸ್‌ ಬಾತ್‌ ದರ 50 - 55 ರೂ.ಗೆ ಏರಿಕೆಯಾಗಿದ್ದರೆ, ಊಟ 90 ರೂ. ನಿಂದ 100 - 105 ರೂ.ಗೆ ತಲುಪಿದೆ. 60 - 70 ರೂ. ಇದ್ದ ಬೆಣ್ಣೆ ಮಸಾಲೆ ದೋಸೆ ಬೆಲೆ 70 - 80 ರೂ. ಮುಟ್ಟಿದೆ. ಚೌಚೌ ಬಾತ್‌ 40 - 50 ರೂ. ನಿಂದ 45 - 55 ರೂ.ಗೆ ಏರಿಕೆಯಾಗಿದೆ. ರೈಸ್‌ ಬಾತ್‌ ದರ ಕೂಡ 10 ರೂ. ಹೆಚ್ಚಳವಾಗಿದೆ. ಬೆಲೆ ಏರಿಕೆಯಿಂದ ಮಧ್ಯಮವರ್ಗದವರಿಗೆ ಪೆಟ್ಟು ಬಿದ್ದಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ.




Comments


bottom of page