top of page

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮುತ್ತಿಕ್ಕಲು ಕ್ಷಣಗಣನೆ

  • Writer: DoubleClickMedia
    DoubleClickMedia
  • Aug 23, 2023
  • 1 min read

Chandhrayana

ಬೆಂಗಳೂರು, ಆಗಸ್ಟ್ 23: ಬಾಹ್ಯಕಾಶ ಲೋಕದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ -3 ಯೋಜನೆಯ ಲ್ಯಾಂಡರ್ ಶಶಿಯ ಸ್ಪರ್ಶಕ್ಕೆ ರೆಡಿಯಾಗಿದೆ. ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ಲ್ಯಾಂಡರ್ ಲ್ಯಾಂಡ್ ಆಗಲು ಸಮಯ ನಿಗದಿ ಮಾಡಲಾಗಿದೆ. ಆದ್ರೆ ಸಂಜೆ 5.45ಕ್ಕೆ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ.



ಬರೋಬ್ಬರಿ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್​ ಲ್ಯಾಂಡರ್​ ಮೂರು ಲಕ್ಷ 84 ಸಾವಿರ ಕಿಲೋ ಮೀಟರ್​ ದೂರ ಇರುವ ಚಂದ್ರನ ಸಮೀಪಕ್ಕೆ ತಲುಪಿದೆ. ಇನ್ನು ಚಂದ್ರನ ಕಕ್ಷೆಗೆ ಸೇರಿದ ಬಳಿಕ ನೌಕೆ ಈವರೆಗೂ ಐದು ಬಾರಿ ಪ್ರದಕ್ಷಿಣೆ ಹಾಕಿದೆ. ಇದೀಗ ಲ್ಯಾಂಡರ್‌ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತಿದ್ದು, ಲ್ಯಾಂಡರ್​ನಿಂದ ಪ್ರಗ್ಯಾನ್​ ರೋವರ್ ಹೊರಬರುವ ಕ್ಷಣಗಣನೆ ಶುರುವಾಗಿದೆ.



ಬೆಂಗಳೂರಲ್ಲೇ ಚಂದ್ರನ 3 ಕಮಾಂಡ್ ಸೆಂಟರ್ ಇದ್ದು, ವಿಕ್ರಮ್

ಲ್ಯಾಂಡರ್‌ಅನ್ನುಬೆಂಗಳೂರಿನಿಂದಲೇ ಕಂಟ್ರೋಲ್ ಮಾಡಲಾಗುತ್ತೆ. ಚಂದ್ರನ ಮೇಲ್ಮೈನಿಂದ 25 ಕಿಲೋ ಮೀಟರ್ ಎತ್ತರದಲ್ಲಿದ್ದು, ವೇಗ ಕಡಿಮೆಯಾದ ಬೆನ್ನಲ್ಲೇ ಲ್ಯಾಂಡಿಂಗ್ ಪ್ರಕ್ರಿಯೆ ಶುರುವಾಗಲಿದೆ. ವಿಕ್ರಮ್ ಲ್ಯಾಂಡರ್ ರೋವರ್ ಹೊರಬರಲಿದೆ.


ಚಂದ್ರನ ಮೇಲೆ 6 ಚಕ್ರ ಹೊಂದಿರುವ ರೋವರ್ ಓಡಾಟ ನಡಸೆೋ ಮೂಲಕ ಸಂಶೋಧನೆ ಆರಂಭವಾಗಲಿದೆ. ರೋವರ್‌ಗೆ ಸೂರ್ಯನ ಬೆಳಕೇ ಶಕ್ತಿಯಾಗಿದ್ದು, ಸೋಲಾರ್ ಪ್ಯಾನಲ್ ಮೂಲಕ ಈ ರೋವರ್ ಓಡಾಟ ನಡೆಸುತ್ತದೆ. ಚಂದ್ರನ ಮೇಲೆ 14 ದಿನ ಕಾಲ ರೋವರ್ ಸಂಶೋಧನೆ ನಡೆಸಲಿದೆ.

Comments


bottom of page