top of page
  • Writer's pictureDoubleClickMedia

ಪಾಕಿಸ್ತಾನದಿಂದ ಭಾರತದ ವಿದ್ಯಾರ್ಥಿಗಳ ಮೇಲೆ ಸೈಬರ್‌ ದಾಳಿ


Pakisthana

ಪಾಕಿಸ್ತಾನವು ಇದೀಗ ಹೊಸ ರೀತಿಯ ಸೈಬರ್‌ ದಾಳಿ ಪ್ರಾರಂಭಿಸಿದ್ದು, ಈ ಬಾರಿ ಶಾಲಾ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಲಾಗಿದೆ. ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು ನಿನ್ನೆಯಿಂದ ಪಾಕಿಸ್ತಾನಿ ಇಂಟೆಲಿಜೆನ್ಸ್ ಆಪರೇಟಿವ್ ಗಳಿಂದ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳು ಬರುತ್ತಿದ್ದು, ಇದುವರೆಗೆ 8617321715 ಮತ್ತು 9622262167 ಸಂಖ್ಯೆಗಳಿಂದ ಕರೆ ಬಂದಿವೆ. ಕರೆ ಮಾಡಿದವರು ಶಾಲಾ ಶಿಕ್ಷಕರಂತೆ ನಟಿಸಿ ವಾಟ್ಸಾಪ್ ಗುಂಪುಗಳಿಗೆ ಸೇರಲು ಮಕ್ಕಳಿಗೆ ಒನ್ ಟೈಮ್ ಪಾಸ್‌ವರ್ಡ್‌ಗಳ (ಒಟಿಪಿ) ಮಾಹಿತಿ ಕೇಳುತ್ತಿದ್ದಾರೆ. ಮೊದಲು ಮಕ್ಕಳಿಗೆ ಪರಿಚಯವಿರುವವರ ಉಲ್ಲೇಖವನ್ನು ನೀಡುವ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸುವ ಇವರು ನಂತರ ಮಕ್ಕಳನ್ನು ಇತರ ಗುಂಪುಗಳಿಗೆ ಸೇರಲು ಹೇಳುತ್ತಾರೆ. ಈ ರೀತಿ ಮಾಡಲು ಅವರು ಒಟಿಪಿಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ ಎಂದು ಭಾರತೀಯ ಸೇನೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.



ವಿದ್ಯಾರ್ಥಿಗಳನ್ನು ಅವರ ತಂದೆಯ ಕೆಲಸ, ಅವರ ಶಾಲಾ ದಿನಚರಿ ಮತ್ತು ಇತರ ವಿವರಗಳ ಬಗ್ಗೆಯೂ ಕೇಳಲಾಗುತ್ತಿದೆ. ಇದನ್ನು ಇನ್ನಷ್ಟು ನಂಬುವಂತೆ ಮಾಡಲು, ಕರೆ ಮಾಡುವವರು ಅವರ ಸಮವಸ್ತ್ರ ಮತ್ತು ಶಿಕ್ಷಕರ ಹೆಸರುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.



ಈ ಕುರಿತು ಜಾಗೃತಿ ವಹಿಸುವಂತೆ ಅಧಿಕಾರಿಗಳು ಶಾಲೆಗಳು ಮತ್ತು ಕಾಲೇಜುಗಳಿಗೆ ಸೂಚಿಸಿದ್ದಾರೆ. ಅಗತ್ಯವಿದ್ದಲ್ಲಿ ಈಗ ಇರುವ ಎಲ್ಲಾ ವಾಟ್ಸಾಪ್ ಗ್ರೂಪ್ ಗಳನ್ನು ವಿಸರ್ಜಿಸಿ ಅವುಗಳ ಬದಲಿಗೆ ಹೊಸದನ್ನು ಮಾಡಲು ಸಲಹೆ ನೀಡಲಾಗಿದೆ. ಸದ್ಯಕ್ಕೆ ಈ ಸಂದೇಶಗಳು ಅಥವಾ ಕರೆಗಳು ಬರುತ್ತಿರುವ ಸಂಖ್ಯೆಗಳ ಪಟ್ಟಿಯು ಒಂದೇ ರೀತಿಯಾಗಿಲ್ಲ. ಕರೆ ಮಾಡುವವರು ಹೊಸ ಸಂಖ್ಯೆಗಳನ್ನು ಬಳಕೆಗೆ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.



Comments


bottom of page