top of page

ಒತ್ತಾಯಪೂರ್ವಕವಾಗಿ ಮಕ್ಕಳಿಂದ ಕುರಾನ್ ಪಠಣೆ ಆರೋಪ: ವಿವಾದಕ್ಕೀಡಾದ ಖಾಸಗಿ ಶಾಲೆಯ ಬಕ್ರೀದ್ ಆಚರಣೆ

  • Writer: DoubleClickMedia
    DoubleClickMedia
  • Jul 1, 2023
  • 1 min read

ಚನ್ನರಾಯಪಟ್ಟಣ: ಖಾಸಗಿ ಶಾಲೆಯೊಂದರಲ್ಲಿ ಬಕ್ರೀದ್ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಬಲವಂತವಾಗಿ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಪಠಿಸಿರುವುದು ಹೊಸ ವಿವಾದವೊಂದನ್ನು ಸೃಷ್ಟಿಸಿದೆ.

school children

ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.


ಹಿಂದೂ ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗಳು ಕುರಾನ್ ಪಠ್ಯಗಳನ್ನು ಪಠಿಸುವಂತೆ ಬಲವಂತ ಮಾಡಿದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ಆಕ್ರೋಶದ ನಂತರ, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಶಾಲಾ ಆಡಳಿತ ಮಂಡಲಿಯುು ಶನಿವಾರ ಭರವಸೆ ನೀಡಿದೆ.


ವಿದ್ಯಾರ್ಥಿಗಳು ಬಕ್ರೀದ್ ಹಬ್ಬದ ಪ್ರಯುಕ್ತ ಪ್ರದರ್ಶನ ನೀಡುವುದನ್ನು ಮತ್ತು ಶಿಕ್ಷಕರು ಅದರ ಕುರಿತು ಭಾಷಣ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಈ ಸಂದರ್ಭದಲ್ಲಿ ನೂರಾರು ಮಕ್ಕಳಿಗೆ ಕುರಾನ್ ಶ್ಲೋಕಗಳನ್ನು ಪಠಿಸುವಂತೆ ಮಾಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವಂತೆ ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆದರೆ ಕುರಾನ್ ಶ್ಲೋಕಗಳನ್ನು ಹೇಳುವಂತೆ ಮಕ್ಕಳನ್ನು ಬಲವಂತ ಮಾಡಿಲ್ಲ ಮತ್ತು ನಮಾಜ್ ಮಾಡಿಸಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಸಾಮರಸ್ಯ ಮತ್ತು ಸಮಗ್ರತೆಯನ್ನು ಸೃಷ್ಟಿಸಲು ಇದನ್ನು ಮಾಡಲಾಗಿದೆ. "ಮುಸ್ಲಿಂ ಸಮುದಾಯದ ಮೂವರು ಮಕ್ಕಳು ಮಾತ್ರ ನಮಾಜ್ ಮಾಡಿದರು, ಇತರರು ಕಣ್ಣು ಮುಚ್ಚಿಕೊಂಡು ಕುಳಿತಿದ್ದರು" ಎಂದು ಆಡಳಿತ‌ ಮಂಡಲಿಯು ಸಮರ್ಥಿಸಿಕೊಂಡಿದೆ.


ಧಾರ್ಮಿಕ ಹಬ್ಬಗಳ ಆಚರಣೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಕರು ಹೇಳಿದ್ದಾರೆ. ಬಕ್ರೀದ್ ಮಾತ್ರವಲ್ಲ, ವಿವಿಧ ಧರ್ಮಗಳ ಎಲ್ಲಾ ಹಬ್ಬಗಳ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು, ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದರೆ, ಸೋಮವಾರ ನಡೆದ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.


Comments


bottom of page