ಚಾರ್ಮಾಡಿ ಘಾಟಿಯಲ್ಲಿ ಬಸ್ಗಳ ಮುಖಾಮುಖಿ ಡಿಕ್ಕಿ, 25ಕಿ.ಮೀ ಟ್ರಾಫಿಕ್ ಜಾಮ್
- DoubleClickMedia
- Jul 7, 2023
- 1 min read

ಕೊಟ್ಟಿಗೆಹಾರ ಜು.7: ಮಳೆ ಹಾಗೂ ದಟ್ಟವಾದ ಮಂಜು ಆವರಿಸಿದ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಚಾಲಕರ ಕಾಲುಗಳಿಗೆ ತೀವ್ರ ಗಾಯವಾದ ಘಟನೆ ಶುಕ್ರವಾರ ನಡೆದಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಡ್ರೈವರ್‌ಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅಪಘಾತಕ್ಕೆ ರಸ್ತೆ ಕಾಮಾಗಾರಿಯೇ ಕಾರಣ ಎಂದು ಹೇಳಲಾಗಿದೆ.
2019ರಲ್ಲಿ ರಸ್ತೆ ಕುಸಿತವಾಗಿ ಆರಂಭವಾಗಿದ್ದ ಕಾಮಗಾರಿ ಇನ್ನು ಮುಗಿದಿಲ್ಲ.ಕಾಮಗಾರಿಯನ್ನು ವೇಗವಾಗಿ ನಡೆಸಿ ಪೂರ್ಣಗೊಳಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಈ ನಡುವೆ ಚಾರ್ಮಾಡಿ ಘಾಟಿಯಲ್ಲಿ ಮಳೆಯ ಕಾರಣ ಮಂಜು ಮುಸುಕಿದ ಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಪ್ರಮಾಣದ ಮಂಜು ಕವಿದಿರುವ ಹಿನ್ನೆಲೆಯಲ್ಲಿ ಎದುರಿಗೆ ಬರುವ ವಾಹನಗಳು ಚಾಲಕರಿಗೆ ಕಾಣಿಸುತ್ತಿಲ್ಲ ಎನ್ನಲಾಗಿದೆ.
ಅಪಘಾತದಿಂದಾಗಿ ಚಾರ್ಮಾಡಿ ಘಾಟಿಯಲ್ಲಿ 25 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವರಾರರು ಪರದಾಟ ನಡೆಸುವಂತಾಯಿತು. ಕೆಲವು ಪ್ರಯಾಣಿಕರು 10 ಕಿ.ಮೀ. ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.
Comments