top of page
  • Writer's pictureDoubleClickMedia

ಇನ್ಮುಂದೆ ಹೀಗಿರಲಿದೆ ಇಂದಿರಾ ಕ್ಯಾಂಟೀನ್‌ ಮೆನು


IndhiraCanteen

ಬೆಂಗಳೂರು ಜೂನ್‌ 20: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾಗೆ ಕ್ಯಾಂಟೀನ್‌ ಮರುಜೀವ ಬಂದಂತಾಗಿದೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಇಂದಿರಾ ಕ್ಯಾಂಟೀನ್‌ನ್ನು ಬಲಪಡಿಸುವುದಾಗಿ ಹೇಳಿದ್ದರು. ಈಗ ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಮೆನು ಬದಲಾವಣೆ ಮಾಡಿ ಗುಣಮಟ್ಟದ ಶುಚಿ ರುಚಿ ಊಟ ನೀಡಲು ನಿರ್ಧಾರ ಮಾಡಲಾಗಿದೆ.



ಇಂದಿನ ಕ್ಯಾಂಟೀನ್‌ ಹೊಸ ಮೆನು:


ಹೊಸ ಮೆನೂ ಪ್ರಕಾರ ಇನ್ನು ಮುಂದೆ ಇಂದಿರಾ ಕ್ಯಾಂಟಿನ್‍ಗಳಲ್ಲಿ ಇಡ್ಲಿ ಚಟ್ನಿ/ ಸಾಂಬಾರ್, ಬ್ರೆಡ್ ಜಾಮ್, ಮಂಗಳೂರು ಬನ್ಸ್, ಬೇಕರಿ ಬನ್, ಪಲಾವ್, ಟೊಮ್ಯಾಟೊ ಬಾತ್, ಖಾರಾ ಪೊಂಗಲ್, ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ರಾಗಿ ಮುದ್ದೆ ಸೊಪ್ಪುಸಾರು ಚಪಾತಿ ಪಲ್ಯದ ಜೊತೆಗೆ ಟೀ ಕಾಫಿ ವ್ಯವಸ್ಥೆಯೂ ಇರಲಿದೆ.


ಸೋಮವಾರ ; ಬೆಳಗ್ಗೆ : ಇಡ್ಲಿ ಸಾಂಬಾರ್, ಪಲಾವ್ ರಾಯಿತ, ಬ್ರೆಡ್ ಜಾಮ್,

ಮಧ್ಯಾಹ್ನ ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು ಜೊತೆಗೆ ಕೀರು.

ರಾತ್ರಿ ಅನ್ನ ಸಾಂಬಾರ್ ಮತ್ತು ರಾಗಿಮುದ್ದೆ ಸೊಪ್ಪು ಸಾರು



ಮಂಗಳವಾರ : ಬೆಳಗ್ಗೆ ಇಡ್ಲಿ ಚಟ್ನಿ/ ಬಿಸಿ ಬೇಳೆ ಬಾತ್/ ಮಂಗಳೂರು ಬನ್ಸ್

ಮಧ್ಯಾಹ್ನ ಅನ್ನ ಸಾಂಬಾರ್ ಜತೆಗೆ ಮೊಸರು ಹಾಗೂ ಚಪಾತಿ ಸಾಗು ಮತ್ತು ಕೀರು

ರಾತ್ರಿ ಅನ್ನ ಸಾಂಬಾರ್ , ರಾಯಿತ , ಚಪಾತಿ , ವೆಜ್ ಕರಿ


ಬುಧವಾರ : ಬೆಳಗ್ಗೆ ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್

ಮಧ್ಯಾಹ್ನ ಅನ್ನ ಸಾಂಬಾರ್ , ಕೀರ್ / ರಾಗಿಮುದ್ದೆ , ಸೊಪ್ಪು ಸಾರು

ರಾತ್ರಿ ಅನ್ನ ಸಾಂಬಾರ್ / ರಾಗಿಮುದ್ದೆ , ಸೊಪ್ಪು ಸಾರು


ಗುರುವಾರ :ಬೆಳಗ್ಗೆ ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ ಜಾಮ್

ಮಧ್ಯಾಹ್ನ ಅನ್ನ ಸಾಂಬಾರ್ , ಮೊಸರು / ಚಪಾತಿ ಸಾಗು, ಕೀರ್

ರಾತ್ರಿ ಅನ್ನ ಸಾಂಬಾರ್, ಮೊಸರು / ಚಪಾತಿ, ವೆಜ್ ಕರಿ



ಶುಕ್ರವಾರ : ಬೆಳಗ್ಗೆ : ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್

ಮಧ್ಯಾಹ್ನ ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು

ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು


ಶನಿವಾರ : ಬೆಳಗ್ಗೆ ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್

ಮಧ್ಯಾಹ್ನ ಅನ್ನ ಸಾಂಬಾರ್, ಕೀರ್ / ಚಪಾತಿ ಸಾಗು, ಕೀರ್

ರಾತ್ರಿ ಅನ್ನ ಸಾಂಬಾರ್, ಮೊಸರು / ಚಪಾತಿ, ವೆಜ್ ಕರಿ



ಭಾನುವಾರ : ಬೆಳಗ್ಗೆ ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ ಜಾಮ್

ಮಧ್ಯಾಹ್ನ ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು

Comments


bottom of page