top of page

ಜೈಲು ಸೇರಿದ ತಂದೆ, ಮಗ; ಮನನೊಂದು ತಾಯಿ ಆತ್ಮಹತ್ಯೆ, ಜೈಲಿನಲ್ಲೇ ಹೃದಯಾಘಾತ ಪತಿ ಸಾವು

  • Writer: DoubleClickMedia
    DoubleClickMedia
  • Aug 22, 2023
  • 1 min read

ree


ಮೈಸೂರು, ಆಗಸ್ಟ್ 22: ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದರೆ, ಇತ್ತ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಇತ್ತ ಪತ್ನಿ ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿದ ಪತಿಗೆ ಜೈಲಿನಲ್ಲೇ ಹೃದಯಾಘಾತವಾಗಿದ್ದು, ಅವರೂ ಕೂಡ ಸಾವನ್ನಪ್ಪಿದ್ದಾರೆ.ಆರೋಪಿ ತೇಜಸ್ ತಾಯಿ ಇಂದ್ರಾಣಿ (35) ನೇಣಿಗೆ ಶರಣಾದವರು.



ಮೈಸೂರಿನ ವಿದ್ಯಾನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲರಾಜ್‌ ಜೊತೆ ಸ್ನೇಹಿತ ತೇಜಸ್, ಈತನ ತಂದೆ, ಮತ್ತಿಬ್ಬರು ಸೇರಿ ಜಗಳ ಮಾಡಿಕೊಂಡು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಆರೋಪಿಗಳಾದ ತೇಜಸ್, ಈತನ ತಂದೆ ಸಾಮ್ರಾಟ್, ಕಿರಣ್ ಸಂಜಯ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.



ತನ್ನ ಪತಿ ಮತ್ತು ಮಗ ಈ ರೀತಿ ಕೃತ್ಯ ಎಸಗಿ ಜೈಲು ಸೇರಿದರಲ್ಲಾ ಎಂದು ಆಘಾತಕ್ಕೆ ಒಳಗಾದ ಇಂದ್ರಾಣಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿದು ಆರೋಪಿಯೂ ಆಗಿರುವ ಇಂದ್ರಾಣಿ ಪತಿ ಸಾಮ್ರಾಟ್​ಗೆ ಜೈಲಿನಲ್ಲೇ ಹೃದಯಾಘಾತವಾಗಿದೆ. ಪ್ರಕರಣ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments


bottom of page