top of page

ಕೇದಾರನಾಥ ದೇವಾಲಯ ಆವರಣದಲ್ಲಿ ಇನ್ಮುಂದೆ ಮೊಬೈಲ್‌ ನಿಷೇಧ

  • Writer: DoubleClickMedia
    DoubleClickMedia
  • Jul 17, 2023
  • 1 min read

ree
Kedharnath Temple

ಡೆಹ್ರಾಡೂನ್ ಜು.17 : ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಸೋಮವಾರ ಕೇದಾರನಾಥ ದೇವಾಲಯದ ಆವರಣದಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ಸಂಪೂರ್ಣ ನಿಷೇಧಿಸಿದೆ. ಯಾರೇ ಆಗಲಿ ಫೋಟೋ ತೆಗೆಯುವುದು ಅಥವಾ ವಿಡಿಯೋ ಮಾಡುವುದು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ದೇವಾಲಯ ಸಮಿತಿ ತಿಳಿಸಿದೆ.



"ದೇವಾಲಯದ ಒಳಗೆ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿ" ಎಂದು ಕೇದಾರನಾಥ ದೇಗುಲದ ಆವರಣದೊಳಗೆ ಹಲವು ಎಚ್ಚರಿಕೆ ಫಲಕಗಳನ್ನು ದೇವಾಲಯ ಸಮಿತಿ ತಿಳಿಸಿದೆ.


ಹಾಗೆ, ದೇವಾಲಯವು ಜನರಿಗೆ ಸಭ್ಯ ಉಡುಪುಗಳನ್ನು ಧರಿಸಲು ಮತ್ತು ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಸ್ಥಾಪಿಸುವುದನ್ನು ನಿಲ್ಲಿಸುವಂತೆಯೂ ಕೇಳಿಕೊಂಡಿದೆ. ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಬೋರ್ಡ್‌ಗಳಲ್ಲಿ ತಿಳಿಸಲಾಗಿದೆ.



ಈ ಬಗ್ಗೆ ಬದರಿನಾಥ ಮತ್ತು ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಪ್ರತಿಕ್ರಿಯೆ ನೀಡಿದ್ದು, ಧಾರ್ಮಿಕ ಸ್ಥಳವು ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಮತ್ತು ಭಕ್ತರು ಕೂಡ ಅದನ್ನು ಗೌರವಿಸಬೇಕು. ದೇವಾಲಯವನ್ನು ಸಂಸ್ಕೃತಿಯ ಪ್ರತಿಬಿಂಬವಾಗಿ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.


ಇತ್ತೀಚೆಗೆ ಮಹಿಳಾ ಬ್ಲಾಗರ್ ಒಬ್ಬರು ದೇವಸ್ಥಾನದ ಮುಂದೆ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದೇವಾಲಯ ಸಮಿತಿ ಈ ಕ್ರಮ ಕೈಗೊಂಡಿದೆ.



Comments


bottom of page