ಗೋಧಿ ದಾಸ್ತಾನಿಗೆ ಮಿತಿ: ಸಗಟು ಮಾರಾಟಗಾರರು ಮತ್ತು ಸಂಸ್ಕರಣೆದಾರರು ಈ ರೀತಿ ಮಾಡಿ
- DoubleClickMedia
- Jun 24, 2023
- 1 min read
ಮಂಗಳೂರು,ಜೂ.24: ಗೋಧಿ ದಾಸ್ತಾನಿಗೆ ಕೇಂದ್ರ ಸರ್ಕಾರವು 2024ರ ಮಾರ್ಚ್ 31ರ ವರೆಗೆ ಮಿತಿ ವಿಧಿಸಿದೆ. ಆದ ಕಾರಣ ಗೋಧಿಯ ವರ್ತಕರು ಹಾಗೂ ಸಂಸ್ಕರಣೆದಾರರು ಗೋಧಿಯ ದಾಸ್ತಾನನ್ನು ಕೇಂದ್ರ ಸರ್ಕಾರದ ಪೋರ್ಟಲ್ ನಲ್ಲಿ ನೋಂದಾಯಿಸಿ ನಿಯಮಿತವಾಗಿ ದಾಸ್ತಾನನ್ನು ಘೋಷಿಸುವಂತೆ ಹಾಗೂ ಪ್ರತೀ ಶುಕ್ರವಾರದಂದು ದಾಸ್ತಾನು ಪ್ರಮಾಣವನ್ನು ಅಪ್‍ಡೇಟ್ ಮಾಡುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿರುವ ಎಲ್ಲಾ ಗೋಧಿಯ ಸಗಟು ಮಾರಾಟಗಾರರು ಮತ್ತು ಸಂಸ್ಕರಣೆದಾರರು ಕೇಂದ್ರ ಸರ್ಕಾರದ ವೆಬ್‍ಸೈಟ್ https://evegoils.nic.in/wsp/login ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಯುಸರ್ ಮ್ಯಾನುವಲ್ ಕೂಡಾ ಲಭ್ಯವಿದ್ದು ಇದರಲ್ಲಿ ತಿಳಿಸಿರುವಂತೆ ನೋಂದಣಿ ಮಾಡಬೇಕಾಗಿದೆ.
ಸರ್ಕಾರವು ಗೋಧಿ ಸಗಟು ಟ್ರೇಡರ್‍ಗಳಿಗೆ 3000 ಎಂ.ಟಿ, ಚಿಲ್ಲರೆ ಮಾರಾಟಗಾರರಿಗೆ 10 ಎಂ.ಟಿ ಹಾಗೂ ಬಿಗ್ ಜೈನ್ ರೀಟೈಲರ್‍ಗೆ 10 ಎಂ.ಟಿ ಪ್ರತಿ ಔಟ್ ಲೆಟ್‍ಗೆ ಹಾಗೂ ಎಲ್ಲಾ ಡಿಪೋ ಸೇರಿ 3000 ಎಂ.ಟಿ ಮತ್ತು ಸಂಸ್ಕರಣೆದಾರರಿಗೆ ವಾರ್ಷಿಕ ನಿರ್ವಹಣಾ ಸಾಮರ್ಥ್ಯ ಅಥವಾ 2023-24ರ ಬಾಕಿ ಉಳಿದ ತಿಂಗಳುಗಳ ಹಾಗೂ ಮಾಸಿಕ ನಿರ್ವಹಣಾ ಸಾಮಥ್ರ್ರ್ಯದ ಗುಣಲಬ್ಧ ಯಾವುದು ಕಡಿಮೆಯೋ ಅಷ್ಟು ಪ್ರಮಾಣದ ದಾಸ್ತಾನು ಮಿತಿಯನ್ನು ವಿಧಿಸಿದೆ. ಗೋಧಿಯ ಎಲ್ಲಾ ಮಾರಾಟಗಾರರು, ಸಂಸ್ಕರಣೆದಾರರು ದಾಸ್ತಾನು ಮಿತಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಹಾಗೂ ಕೇಂದ್ರ ಸರ್ಕಾರದ ವೆಬ್‍ಸೈಟ್‍ನಲ್ಲಿ ನೋಂದಾಯಿಸಿ ವ್ಯವಹಾರವನ್ನು ಪಾರದರ್ಶಕವಾಗಿ ನಿರ್ವಹಿಸುವಂತೆ ನೋಂದಾಯಿಸದೇ ಇದ್ದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comentários