top of page
  • Writer's pictureDoubleClickMedia

ಇವೇ ನೋಡಿ ಹೃದಯಘಾತದ ಮುನ್ಸೂಚನೆಗಳು


HeartAttack

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೂ ವಯಸ್ಸಿಗೂ ಸಂಬಂಧವೇ ಇಲ್ಲ ಎನಿಸುತ್ತಿದೆ. ಹದಿಹರೆಯದ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಈ ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗ ಹಸುಳೆಯಿಂದ ಹಿಡಿದು ವಯೋವೃದ್ಧರವರೆಗೆ ಯಾವುದೇ ವಯಸ್ಸಿನವರು, ಯಾವುದೇ ಸಮಯದಲ್ಲಿ ಹೃದಯಾಘಾತದ ಅಪಾಯವನ್ನು ಎದುರಿಸುತ್ತಾರೆ.



ಹೃದಯಾಘಾತಕ್ಕೆ ಮುಖ್ಯ ಕಾರಣ ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಆಗುವ ಅಡಚಣೆ. ದೇಹದಲ್ಲಿ ಸಂಗ್ರಹವಾದ ಕೊಬ್ಬು ಹೃದಯಾಘಾತಕ್ಕೆ ಕಾರಣವಾಗುತ್ತದೆ. ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದು ರಕ್ತದ ಹರಿವಿನಲ್ಲಿ ಅಡಚಣೆಯನ್ನು ಉಂಟು ಮಾಡುತ್ತದೆ. ಇದರಿಂದ ಹೃದಯ ಸ್ನಾಯುಗೆ ಆಮ್ಲಜನಕ ಸಿಗುವುದಿಲ್ಲ. ಇದರಿಂದ ಹೃದಯಘಾತ ಉಂಟಾಗುತ್ತದೆ.



ಹೃದಯಘಾತದ ಮುನ್ಸೂಚನೆಗಳು:


*ಅತಿಯಾದ ಬೆವರು

ಯಾವುದೇ ಸೂಕ್ತ ಕಾರಣಗಳಿಲ್ಲದೆ ನೀವು ಹಠಾತ್‌ ಆಗಿ ಸಿಕ್ಕಾಪಟ್ಟೆ ಬೆವರಲಾರಂಭಿಸಿದರೆ ಅದು ಹೃದಯಾಘಾತದ ಮೊದಲ ಲಕ್ಷ ಣವಾಗಿರಬಹುದು ಎನ್ನುತ್ತಾರ ತಜ್ಞರು. ಹೃದಯದ ರಕ್ತಚಲನೆ(ಕಾರ್ಡಿಯಾಕ್‌ ಔಟ್‌ಪುಟ್‌)ಯಲ್ಲಿನ ಕುಸಿತ ಹಾಗೂ ನರಗಳ ಅತಿಯಾದ ಅನುವೇದನೆಯಿಂದಾಗಿ ಈ ರೀತಿ ಬೆವರು ಬರಬಹುದು.



*ಕೈಗಳ ತೋಳುಗಳಲ್ಲಿ ನೋವು ಕಾಣಿಸಿಕೊಳ್ಳುವುದು

ಕೈಗಳ ತೋಳುಗಳಲ್ಲಿ, ಭುಜದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಹೃದಯಾಘಾತದ ಪ್ರಮುಖ ಲಕ್ಷಣಗಳು ಎಂದು ಹೇಳಬಹುದು. ಅದರಲ್ಲೂ ಕೈಗಳ ತೋಳುಗಳಲ್ಲಿ ಕಂಡು ಬರುವ ನೋವು ನಿಧಾನಕ್ಕೆ ಇತರ ಕಡೆಗೆ ಹರಡುತ್ತಿದ್ದರೆ, ಎಚ್ಚರ ವಹಿಸ ಬೇಕು.



*ನಿರಂತರವಾಗಿ ಕೆಮ್ಮು ಬರುವುದು


ಪದೇ ಪದೇ ಕೆಮ್ಮು ಬರುವುದು ಕೂಡ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳ ಲಕ್ಷಣವಾಗಿದೆ. ಒಂದು ವೇಳೆ ಕೆಮ್ಮಿನ ಜತೆಗೆ ರಕ್ತ ಬರುತ್ತಿದ್ದರೆ, ಇದು ಹೃದಯಾಘಾತದ ಲಕ್ಷಣ ಎನ್ನುವುದರಲ್ಲಿ ಸಂದೇಹ ವಿಲ್ಲ.​


*ಅಜೀರ್ಣ ಮತ್ತು ವಾಂತಿ

ವಿಲಕ್ಷ ಣ ಎನಿಸಿದರೂ ಕೂಡ, ಹಠಾತ್‌ ಆಗಿ ವಾಂತಿಯಾಗುತ್ತಿದ್ದರೆ ಅದು ಕೂಡ ಹೃದಯಾಘಾತದ ಲಕ್ಷ ಣವಾಗಿರಬಹುದು. ಯಾವುದೇ ರೀತಿಯ ವಿಷಾಹಾರದ ಹಿನ್ನೆಲೆ ಇಲ್ಲದೇ ಈ ರೀತಿ ವಾಂತಿಯಾಗುತ್ತಿದ್ದರೆ ಅದನ್ನು ಹೃದಯ ಸಂಬಂಧಿ ಲಕ್ಷ ಣ ಎಂದು ಪರಿಗಣಿಸಬಹುದು.



*ಹಸಿವಾಗದಿರುವುದು

ಹಸಿವಾಗದಿರುವುದಕ್ಕೆ ಅನೇಕ ಕಾರಣಗಳಿರಬಹುದು. ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೂ ಹಸಿವು ಆಗುವುದಿಲ್ಲ ಎನ್ನುತ್ತಾರೆ ತಜ್ಞರು.


*ಹಠಾತ್‌ ಮತ್ತು ತಾತ್ಕಾಲಿಕ ಪ್ರಜ್ಞೆಹೀನರಾಗುವುದು

ಪ್ರಜ್ಞಾಶೂನ್ಯತೆ ಕೂಡ ಹೃದಯ ಸಂಬಂಧಿ ಸಮಸ್ಯೆಯಾಗಿರಬಹುದು ಎನ್ನುತ್ತಾರೆ ತಜ್ಞರು. ಹಠಾತ್‌ ಮತ್ತು ಕ್ಷಣಿಕವಾಗಿ ಮೂರ್ಛೆ ಹೋಗುವುದು ಅಥವಾ ಪ್ರಜ್ಞೆ ತಪ್ಪಿ, ಮತ್ತೆ ಕೂಡಲೇ ಅದರಿಂದ ಸ್ವಾಭಾವಿಕವಾಗಿ ಚೇತರಿಕೆ ಕಾಣುವುದು ಮತ್ತೊಂದು ಹೃದಯಘಾತದ ಲಕ್ಷ ಣವಾಗಿರಬಹುದು.



*ದವಡೆ ನೋವು

ಒಂದು ವೇಳೆ, ಎದೆಯೆಲುಬು ಹಿಂದಿನಿಂದ ಗಂಟಲೂತ ನೋವು ಕಾಣಿಸಿಕೊಂಡರೆ ಹುಷಾರಾಗಿರಬೇಕು. ಇದಕ್ಕೆ ಕಾರಣವೆಂದರೆ, ಆಮ್ಲಜನಿಕಭರಿತ ರಕ್ತವು ಹೃದಯ ಸ್ನಾಯುಗಳಿಗೆ ಸಾಕಾಗುವಷ್ಟರ ಮಟ್ಟಿಗೆ ಪರಿಚಲನೆಯಾಗದಿದ್ದಾಗ ಈ ನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ತೋಳು, ಕುತ್ತಿಗೆ, ಭುಜಗಳು, ಹೊಟ್ಟೆಯ ಮೇಲ್ಭಾಗ, ಬೆನ್ನು ಮತ್ತು ದವಡೆಯಲ್ಲೂ ನೋವು ಕಾಣಿಸಿಕೊಳ್ಳಬಹುದು. ತೀವ್ರತರವಾದ ದವಡೆ ನೋವು ಕೂಡ ಹೃದಯಘಾತದ ಲಕ್ಷ ಣವಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.


ಈ ಮೇಲಿನ ಲಕ್ಷಣಗಳು ಕಂಡು ಬಂದರೆ ನಿಲ್ಯಕ್ಷಿಸಬೇಡಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.





Kommentare


bottom of page