top of page

ಮಂಗಳೂರು: ಜುಲೈ 2ರಂದು ಮತ್ಸ್ಯೋತ್ಸವ-2023

  • Writer: DoubleClickMedia
    DoubleClickMedia
  • Jun 30, 2023
  • 1 min read

fish festival


ಮಂಗಳೂರು,ಜೂ.30: ಮೀನುಗಾರಿಕಾ ಇಲಾಖೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಜುಲೈ 2ರ ಭಾನುವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಲೇಕ್ ಗಾರ್ಡನ್‍ನಲ್ಲಿ ಮತ್ಯೋತ್ಸವವನ್ನು ಏರ್ಪಡಿಸಲಾಗಿದೆ.



ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕೆರೆಯಲ್ಲಿ ಬೆಳೆಸಿದ ರೋಹು, ಕಾಟ್ಲಾ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡುಲಾಗುವುದು ಹಾಗೂ ಮೀನುಗಾರಿಕಾ ಇಲಾಖೆಯ ವತಿಯಿಂದ ಸಮುದ್ರದ ತಾಜಾ ಮೀನುಗಳು ಮತ್ತು ಅವುಗಳ ಖಾದ್ಯಗಳ ಮಾರಾಟ ವ್ಯವಸ್ಥೆಯನ್ನು ಕೆರೆಯ ದಂಡೆಯಲ್ಲಿ ಏರ್ಪಡಿಸಲಾಗಿದೆ.


ಅಲಂಕಾರಿಕ ಮೀನುಗಳು ಮಾರಾಟಕ್ಕೆ ಲಭ್ಯವಿದೆ. ಮೀನುಗಳ ಮಾರಾಟ ಪ್ರಕ್ರಿಯೆ ಬೆಳಿಗ್ಗೆ 8 ರಿಂದ ಪ್ರಾರಂಭವಾಗಲಿದೆ ಹಾಗೂ ಮೀನು ಲಭ್ಯವಿರುವ ತನಕ ಮತ್ಸ್ಯೋತ್ಸ ನಡೆಯಲಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Comments


bottom of page