top of page

ಮಂಗಳೂರು: ವಿಶೇಷ ಕಾರ್ಯಾಚರಣೆ 298 ಮಂದಿಯ ಡಿಎಲ್ ರದ್ದು‌

Writer: DoubleClickMedia
DoubleClickMedia
Aug 22, 2023
1 min read

traffic rules


ಮಂಗಳೂರು, ಆಗಸ್ಟ್‌ 22: ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಆಗಸ್ಟ್ 6ರಿಂದ 21ರವರೆಗೆ ಸಂಚಾರಪೊಲೀಸರು ನಡೆಸಿದ ತಪಾಸಣೆಯ ಸಂದರ್ಭ ಸಂಚಾರ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ 298 ಮಂದಿ ಚಾಲಕ-ಸವಾರರ ಚಾಲನಾ ಪರವಾನಿಗೆ (ಡಿಎಲ್) ಆರ್‌ಟಿಒ ಶಿಫಾರಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಪಾರ್ಕ್ ಮಾಡಲಾದ 593, ಕರ್ಕಶ ಹಾರ್ನ್ ಬಳಸುತ್ತಿದ್ದ 106, ಟಿಂಟ್ ಗ್ಲಾಸ್ ಹಾಕಿದ್ದ 70, ಏಕಮುಖ ಸಂಚಾರ ಮಾಡಿದ 28 ಹಾಗೂ ಹೆಚ್ಚು ಬಾಡಿಗೆ ಅಥವಾ ಸೂಚಿತ ಸ್ಥಳಕ್ಕೆ ಬರಲೊಪ್ಪದ 13 ರಿಕ್ಷಾ ಚಾಲಕರ ವಿರುದ್ಧ ಸಹಿತ 810 ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.


ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು:


*ಅನಿಯಮಿತ ವೇಗ ಮತ್ತು ನಿರ್ಲಕ್ಷ್ಯ - 71


*ಮದ್ಯಪಾನ - 20


*ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ - 42


* ವಾಹನ ಸಂಚಾರ/ಚಾಲನೆ ವೇಳೆ ಮೊಬೈಲ್ ಬಳಕೆ - 4

*ಕೆಂಪು ದೀಪ ಉಲ್ಲಂಘಿಸಿದ - 10

*ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್‌ನ - 7

*ಹೆಲ್ಮಟ್ ಧರಿಸದ - 128

*ಸೀಟ್ ಬೆಲ್ಟ್ ಹಾಕದ - 16





Comments


bottom of page