top of page
  • Writer's pictureDoubleClickMedia

ಬೈಡನ್‌ ದಂಪತಿಗೆ ದಶದಾನ ರೂಪದಲ್ಲಿ ಉಡುಗೊರೆ ನೀಡಿದ ಮೋದಿ


Modi

ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹಾಗೂ ಅವರ ಪತ್ನಿ ಜಿಲ್‌ ಬೈಡನ್‌ ರವರಿಗೆ ಭಾರತೀಯ ಸಂಸ್ಕ್ರತಿಯನ್ನು ಬಿಂಬಿಸುವ ದಶದಾನ ವಸ್ತುಗಳನ್ನು ಒಳಗೊಂಡ ಶ್ರೀಗಂಧದ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.


ಮೋದಿ ನೀಡಿರುವ ದಶದಾನದ ಶ್ರೀಗಂಧದ ಪೆಟ್ಟಿಗೆಯಲ್ಲಿ ಏನೇನಿದೆ:


ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ಮೈಸೂರಿನಿಂದ ತಂದ ಶ್ರೀಗಂಧದ ಮರದ ಕಟ್ಟಿಗೆಯಿಂದ ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯೊಂದಿಗೆ ಭಾರತೀಯ ಸಂಸ್ಕ್ರತಿಯನ್ನು ಬಿಂಬಿಸುವ ದಶದಾನ ರೂಪದಲ್ಲಿ ಪ್ರಧಾನಿ ಮೋದಿ ಉಡುಗೊರೆಯನ್ನು ನೀಡಿದ್ದಾರೆ.



ಗಂಧದ ಪೆಟ್ಟಿಗೆಯಲ್ಲಿ ಕೋಲ್ಕತ್ತಾ ಬೆಳ್ಳಿ ವ್ಯಾಪಾರಿಗಳಿಂದ ತಯಾರಿಸಿದ ಬೆಳ್ಳಿಯ ಗಣೇಶನ ವಿಗ್ರಹವನ್ನು ಇರಿಸಿಲಾಗಿದೆ. ಅದರಲ್ಲಿ ದೀಪವೂ ಕೂಡ ಇದೆ. ಪಶ್ಚಿಮ ಬಂಗಾಳದ ಕುಶಲಕರ್ಮಿ ತಯಾರಿಸಿದ ಬೆಳ್ಳಿಯ ತೆಂಗಿನಕಾಯಿಯನ್ನು ಕೂಡ ನೀಡಲಾಗಿದೆ. ಭೂದಾನಕ್ಕಾಗಿ ಭೂಮಿಯ ಬದಲು ಶ್ರೀಗಂಧದ ತುಂಡನ್ನು ಕೊಡಲಾಗಿದೆ.


ತಮಿಳುನಾಡಿನಿಂದ ತಂದಿರುವ ಬಿಳಿ ಎಳ್ಳನ್ನು ಈ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ರಾಜಸ್ಥಾನದಲ್ಲಿ ಸಿದ್ಧಪಡಿಸಲಾದ 24ಕೆ ಶುದ್ಧ ಹಾಗೂ ಹಾಲ್ಮಾರ್ಕ್​ ಇರುವ ಚಿನ್ನದ ನಾಣ್ಯವನ್ನು ಹಿರಣ್ಯದಾನ ರೂಪದಲ್ಲಿ ನೀಡಲಾಗಿದೆ. ಪೆಟ್ಟಿಗೆಯು ಶೇ.99.5ರಷ್ಟು ಶುದ್ಧ ಮತ್ತು ಹಾಲ್​ಮಾರ್ಕ್​ ಬೆಳ್ಳಿಯ ನಾಣ್ಯವನ್ನು ಹೊಂದಿದೆ. ಇದರ ಜೊತೆಗೆ ಕೆಲ ಬಾಕ್ಸ್‌ಗಳು ಇದ್ದು, ಅದರಲ್ಲಿ ತುಪ್ಪ, ಅಕ್ಕಿ, ರೇಷ್ಮೆ ಬಟ್ಟೆ, ಬೆಲ್ಲವನ್ನು ಇಡಲಾಗಿದೆ.



ಜಿಲ್ ಬೈಡನ್​ಗೆ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದರು. ಈ ವಜ್ರವು ರಾಸಾಯನಿಕ ಹಾಗೂ ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಸೌರ ಮತ್ತು ಪವನ ಶಕ್ತಿಯಂತಹ ಪರಿಸರ -ವೈವಿಧ್ಯ ಸಂಪನ್ಮೂಲಗಳನ್ನು ಅದರ ತಯಾರಿಕೆಯಲ್ಲಿ ಬಳಸಲಾಗಿದೆ


ಪ್ರಧಾನಿ ಮೋದಿಗೆ ಜೋ ಬೈಡನ್ ನೀಡಲಿರುವ ಉಡುಗೊರೆ:


ಮೋದಿಯವರಿಗೆ ಜೋ ಬೈಡನ್‌ 20ನೇ ಶತಮಾನದ ಆರಂಭದಲ್ಲಿ ಮಾಡಿದ ಅಮೆರಿಕನ್ ಬುಕ್ ಗ್ಯಾಲರಿ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಹಾಗೆಯೇ ಪ್ರಾಚೀನ ಅಮೆರಿಕನ್ ಕ್ಯಾಮರಾ ಹಾಗೂ ಜಾರ್ಜ್​ ಈಸ್ಟ್​ಮನ್ ಅವರ ಮೊದಲ ಪೇಟೆಂಟ್ ಹೊಂದಿದ ಕೊಡ್ಯಾಕ್ ಕ್ಯಾಮರಾದ ಫೆಸಿಮೈನ್ ಪ್ರಿಂಟ್ ಪ್ರತಿಯನ್ನೂ ನೀಡಲಿದ್ದಾರೆ. ಜತೆಗೆ ಹಾರ್ಡ್​ ಕವರ್ ಹೊಂದಿದ ಅಮೆರಿಕದ ವನ್ಯಜೀವಿ ಫೋಟೊಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಲಿದ್ದಾರೆ.



Comments


bottom of page