top of page

ಸೋಮೇಶ್ವರ ಬೀಚ್ ನಲ್ಲಿ ನೈತಿಕ‌ ಪೋಲಿಸ್ ಗಿರಿ: ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ!

  • Writer: DoubleClickMedia
    DoubleClickMedia
  • Jun 2, 2023
  • 1 min read

ಸೋಮೇಶ್ವರ, ಜೂನ್ 2, 2023 : ಹಿಂದೂ ಯುವತಿಯರ ಜೊತೆ ಸುತ್ತಾಡುತ್ತಿದ್ದ ಮೂವರು ಮುಸ್ಲಿಂ ಹುಡುಗರ ಮೇಲೆ ಹಲ್ಲೆ ವ್ಯಕ್ತಿಗಳ ಗುಂಪೊಂದು ಗುರುವಾರ ಹಲ್ಲೆ ನಡೆಸಿದೆ. ಸೋಮೇಶ್ವರ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ವಿಹಾರಕ್ಕೆಂದು ಬಂದಿದ್ದ ಮೂವರು ಹುಡುಗರು ಮತ್ತು ಮೂವರು ಹುಡುಗಿಯರನ್ನು ಒಳಗೊಂಡ ತಂಡವನ್ನು ಗುಂಪೊಂದು ಪ್ರಶ್ನಿಸಲು ಪ್ರಾರಂಭಿಸಿದೆ. ಈ ವೇಳೆ ತೀವ್ರ ವಾಗ್ವಾದ ನಡೆದು, ದುಷ್ಕರ್ಮಿಗಳು ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆಯು ಒಂದು ವಾರದೊಳಗೆ ಕರ್ನಾಟಕದಲ್ಲಿ ವರದಿಯಾದ ಎರಡನೆಯ ನೈತಿಕ ಪೋಲೀಸ್ ಗಿರಿಯ ಪ್ರಕರಣವಾಗಿದೆ.


ಮೂಲಗಳ ಪ್ರಕಾರ  ವಿದ್ಯಾರ್ಥಿಗಳು ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದು, ಯುವಕರು ಕೇರಳದ ಕಣ್ಣೂರಿನವರಾಗಿದ್ದರೆ, ಯುವತಿಯರು ಕಾಸರಗೋಡು ಮೂಲದವರಾಗಿದ್ದಾರೆ‌. ಹಲ್ಲೆಗೊಳಗಾದ ಯುವಕರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

Comments


bottom of page