top of page

ದಾಂಪತ್ಯಕ್ಕೆ ಅಂತ್ಯ ಹಾಡಿದ ನಿರೂಪಕಿ ಚೈತ್ರಾ

  • Writer: DoubleClickMedia
    DoubleClickMedia
  • Jul 28, 2023
  • 1 min read

chaitra vasudevan

ನಟಿ-ನಿರೂಪಕ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿ ಎಲ್ಲರ ಗಮನಸೆಳೆದಿದ್ದ ಚೈತ್ರಾ ವಾಸುದೇವನ್ ಅವರು ತಮ್ಮ ಪತಿ ಸತ್ಯ ನಾಯ್ಡು ಅವರೊಂದಿಗೆ ವಿಚ್ಛೇದನವನ್ನು ಪಡೆದಿದ್ದಾರೆ.



6 ವರ್ಷಗಳ ದಾಂಪತ್ಯಕ್ಕೆ ನಟಿ ಚೈತ್ರಾ ಅವರು ಅಂತ್ಯ ಹಾಡಿದ್ದು, ಈ ಕುರಿತಾಗಿ ಇನ್​ಸ್ಟಾಗ್ರಾಮ್​​ನಲ್ಲಿ ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ.


'ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಇವೆಂಟ್ & ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ' ಎಂದು ಚೈತ್ರಾ ವಾಸುದೇವನ್‌ ಹೇಳಿಕೊಂಡಿದ್ದಾರೆ.



ಈವೆಂಟ್‌ವೊಂದರಲ್ಲಿ ಕುಂದಾಪುರದ ಹುಡುಗಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾಗಿದ್ದರು.





Comments


bottom of page