ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ?
- DoubleClickMedia
- Jun 17, 2023
- 1 min read
2023-24ನೇ ಸಾಲಿಗೆ ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿಗೆ 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗು ತೊರೆದು ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ, ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಬೇಕಾದ ದಾಖಲೆಗಳು:
ಮಕ್ಕಳು ಶೌರ್ಯ ಪ್ರದರ್ಶಿಸಿದ ಅವಧಿ 2022ರ ಜುಲೈ 1ರಿಂದ 2023ರ ಸೆಪ್ಟೆಂಬರ್ 30ರೊಳಗೆ ನಡೆದಿರಬೇಕು. ಈ ಬಗ್ಗೆ ಪೋಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ, ಛಾಯಾಚಿತ್ರ, ಜನ್ಮ ದಾಖಲೆ (ಆಯಾ ವ್ಯಾಪ್ತಿಯ ಪ್ರಾಂಶುಪಾಲರು ಮುಖ್ಯೋಪಾಧ್ಯಾಯರು ಮತ್ತು ಠಾಣಾಧಿಕಾರಿ ದೃಢೀಕರಿಸಿದ) ಹಾಗೂ ಶೌರ್ಯ ಪ್ರದರ್ಶಿಸಿದ ಬಗೆಗಿನ ಪತ್ರಿಕಾ ವರದಿ ಇನ್ನಿತರ ಪೂರಕ ದಾಖಲೆಗಳನ್ನು ಅರ್ಜಿ ಜೊತೆಗೆ ಲಗತ್ತಿಸಿರಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ ಮತ್ತು ಕೊನೆಯ ದಿನಾಂಕ:
ಅರ್ಜಿಯನ್ನು ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ 2023ರ ಅಕ್ಟೋಬರ್ 10 ರೊಳಗೆ ಸಲ್ಲಿಸಬೇಕು.
(ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ: ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀಶಕ್ತಿ ಭವನ, ಎರಡನೇ ಮಹಡಿ, ಮೆಸ್ಕಾಂ ಬಳಿ ಬಿಜೈ, ಮಂಗಳೂರು, ದೂರವಾಣಿ ಸಂಖ್ಯೆ: 0824-2451254)
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ: www.iccw.co.in
Comments