top of page
  • Writer's pictureDoubleClickMedia

ನೀಲಿಬಣ್ಣಕ್ಕೆ ತಿರುಗಿದ ನವಜಾತ ಶಿಶುವಿನ ದೇಹ: 60 ಎಂಎಲ್‌ನಷ್ಟು ನಿಕೋಟಿನ್ ಪತ್ತೆ


60 mL of nicotine

ಗುಜರಾತ್‌: ಅಹಮದಾಬಾದ್‌ನ ಮೆಹ್ಸಾನ್‌ನಲ್ಲಿ ಆಗ ತಾನೆ ಹುಟ್ಟಿದ ಮಗುವಿನ ದೇಹದಲ್ಲಿ 60 ಎಂಎಲ್‌ನಷ್ಟು ನಿಕೋಟಿನ್‌ ಅಂಶ ಪತ್ತೆಯಾಗಿದೆ. ಹುಟ್ಟಿದ ಮಗು ಅಳುತ್ತಿರಲಿಲ್ಲ, ಮೈಯೆಲ್ಲಾ ನೀಲಿಗಟ್ಟಿತ್ತು. ತಕ್ಷಣವೇ ಮಗುವನ್ನು ಐಸಿಯುನಲ್ಲಿ ಇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೂ ಕಳುಹಿಸಿ ಪರೀಕ್ಷಿಸಿದ ನಂತರ ನಿಕೋಟಿನ್‌ ಅಂಶ ಪತ್ತೆಯಾಗಿದೆ.



ಸಿಸೇರಿಯನ್ ಹೆರಿಗೆಯಲ್ಲಿ ಜನಿಸಿದ್ದ ಆರೋಗ್ಯವಾಗಿ ಕಾಣಿಸುತ್ತಿದ್ದ ಮಗುವಿನ ದೇಹದಲ್ಲಿ ದೊಡ್ಡವರು ಸೇವಿಸುವುದಕ್ಕಿಂತ 3 ಸಾವಿರ ಪಾಲು ಅಧಿಕ ನಿಕೋಟಿನ್ ಅಂಶ ಕಂಡು ಬಂದಿದೆ. ನವಜಾತ ಶಿಶುವಿನ ದೇಹದಲ್ಲಿಇಷ್ಟೊಂದು ಪ್ರಮಾಣದ ಡ್ರಗ್ ಪ್ರಮಾಣ ನೋಡಿ ವೈದ್ಯರು ಅಚ್ಚರಿಗೊಂಡಿದ್ದಾರೆ. ಆರಂಭಿಕವಾಗಿ ಮಗುವಿಗೆ ಉಸಿರಾಟದ ಸಮಸ್ಯೆ ಇದ್ದಂತೆ ಕಂಡುಬಂದಿತ್ತು. ಆದರೆ ಲಕ್ಷಣಗಳು ಅಸಾಮಾನ್ಯವಾಗಿದ್ದವು ಮಗುವನ್ನು ಪರೀಕ್ಷಿಸಿದಾಗ ನಿಕೋಟಿನ್ ಅಂಶ ಪತ್ತೆಯಾಗಿತ್ತು. ಬಳಿಕ ಈ ಬಗ್ಗೆ ವೈದ್ಯರು ಪರಿಶೀಲನೆ ನಡೆಸಿದಾಗ ಮಗುವಿನ ತಾಯಿಯು ಗರ್ಭಿಣಿಯಾಗಿದ್ದ ವೇಳೆ ಅತಿಯಾಗಿ ತಂಬಾಕು ಸೇವಿಸುತ್ತಿದ್ದ ಪರಿಣಾಮ ನವಜಾತು ಶಿಶುವಿನ ಮೇಲೆ ಬೀರಿದೆ ಎಂದು ತಿಳಿದುಬಂದಿದೆ.



ಮಗುವಿನ ತಾಯಿ 15ನೇ ವಯಸ್ಸಿನಿಂದ ತಂಬಾಕು ವ್ಯಸನಿಯಾಗಿದ್ದು, ಗರ್ಭಾವಸ್ಥೆಯಲ್ಲೂ ದಿನಕ್ಕೆ 10 ರಿಂದ 15 ಬಾರಿ ಗುಟ್ಕಾ ಜಗಿಯುತ್ತಿದ್ದಳು ಎಂಬುದು ತಿಳಿದುಬಂದಿದೆ. ಈಕೆಯ ಕೆಟ್ಟ ಚಟವೇ ಮಗುವಿನ ಆರೋಗ್ಯವನ್ನು ಅಪಾಯಕ್ಕೆ ತಳ್ಳಿದೆ. ಇದು ರಕ್ತದಲ್ಲಿ ಮಗುವಿನ ದೇಹವನ್ನು ಸೇರಿದೆ. ಇದರ ಪರಿಣಾಮ ಮಗುವಿನ ರಕ್ತದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿಕೋಟಿನ್ ಅಂಶ ಕಂಡು ಬಂದಿದೆ. ಇದೀಗ 5 ದಿನಗಳ ಬಳಿಕ ಮಗುವಿನ ಆರೋಗ್ಯ ಸುಧಾರಿಸುತ್ತಿದೆ. ಅಲ್ಲದೇ ಮಗುವಿಗೆ ಎದೆಹಾಲುಣಿಸುವ ಸಮಯದಲ್ಲಿ ತಂಬಾಕು ಸೇವಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ.




Comments


bottom of page