top of page
  • Writer's pictureDoubleClickMedia

ಚಂದ್ರಯಾನ 3 ಅನ್ನು ಅಣಕಿಸುವ ಪ್ರಕಾಶ್ ರಾಜ್ ಪೋಸ್ಟ್ ಗೆ ನೆಟ್ಟಿಗರು ಗರಂ


Prakash Raj

ಬೆಂಗಳೂರು, ಆಗಸ್ಟ್‌ 21: ವಿವಾದಾತ್ಮಕ ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರು ಟ್ವೀಟ್ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ಮಿಷನ್ ಬಗ್ಗೆ ಪ್ರಕಾಶ್ ರಾಜ್ ಅಪಹಾಸ್ಯ ಮಾಡಿರುವ ಟ್ವಿಟರ್ ಪೋಸ್ಟ್ ಎಲ್ಲರಿಗೂ ಆಕ್ರೋಶ ಉಂಟುಮಾಡಿದೆ.



ಭಾರತದ ಬಹುನೀರಿಕ್ಷೆಯ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದ್ದು, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರ ಮೊಗದಲ್ಲಿ ಸಂತಸ ಮೂಡಿದೆ.


ದೇಶದ್ಯಾಂತ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಸಲು ವಿಶೇಷ ಪ್ರಾರ್ಥನೆಗಳು ಹಾಗೂ ಚಂದ್ರಯಾನ ಯೋಜನೆಯಲ್ಲಿ ಈವರೆಗಿನ ಯಶಸ್ಸಿಗೆ ಸಾಕಷ್ಟು ಪ್ರಶಂಸೆ ನಡೆಯುತ್ತಿವೆ. ಇದೇ ವೇಳೆ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಮುನ್ನ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರನ್ನು ಅಪಹಾಸ್ಯ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.



ಚಹಾ ಮಾಡುವ ವ್ಯಕ್ತಿಯೊಬ್ಬನ ವಿರೂಪಗೊಳಿಸಿದ ಚಿತ್ರ ಹಂಚಿಕೊಂಡಿರುವ ಪ್ರಕಾಶ್ ರಾಜ್ ವಿಕ್ರಮ್ ಲ್ಯಾಂಡರ್​ ಮೂಲಕ ಚಂದ್ರನಿಂದ ಬರುತ್ತಿರುವ ಮೊದಲ ಚಿತ್ರ ಎಂಬ ಕ್ಯಾಪ್ಷನ್ ಹಾಕಿದ್ದಾರೆ. ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದಾರೆ.



ಈ ಪೋಸ್ಟ್‌ಗೆ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ಧ ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ, ಹಲವರು ನಟನ ವಿರುದ್ಧ ಟ್ರೋಲ್‌ ಮಾಡ್ತಿದ್ದಾರೆ. ದೇಶ ಭಕ್ತಿ,‌ದೇಶದ‌ ಏಳ್ಗೆ ಸಹಿಸದ ಒಂಚೂರು ದೇಶದ ಬಗ್ಗೆ ಅಭಿಮಾನವಿಲ್ಲದ ಈ‌ ರೀತಿ ಪೋಸ್ಟ್ ಮಾಡಿದ್ದಾರೆ ಇದು ದೇಶದ್ರೋಹಕ್ಕೆ ಸಮಾನ ಪ್ರಕಾಶ್ ರಾಜ್ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆಧಾರಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.


ವ್ಯಂಗ್ಯ ಮಾಡುವುದಕ್ಕೂ ಲಿಮಿಟ್ ಇದೆ. ದೇಶದ ವಿರುದ್ಧವೇ ಟ್ವೀಟ್ ಮಾಡುವುದಲ್ಲ ಎಂದು ಬುದ್ದಿ ಹೇಳಿದ್ದಾರೆ. ಮೋದಿಯನ್ನು ದ್ವೇಷಿಸುವುದು ಒಂದು ವಿಷಯ, ಆದರೆ ಭಾರತದ ಅಭಿವೃದ್ಧಿಯನ್ನು ದ್ವೇಷಿಸುವುದು ಅಸಹ್ಯಕರ ಮತ್ತು ಪ್ರಕಾಶ್ ರಾಜ್ ಅವರಂತಹ ಕೀಳು ಜೀವಿಗಳು ಮಾತ್ರ ಮಾಡಬಹುದು. ಚಂದ್ರಯಾನವು ಭಾರತದ ಹೆಮ್ಮೆ, ಮತ್ತು ಇಡೀ ದೇಶವು ಯೋಜನೆಯ ಹಿಂದೆ ಇದೆ, ಅಂತಹ ದೇಶ ದ್ರೋಹಿಗಳನ್ನು ಹೊರತುಪಡಿಸಿ, ಭಾರತವು ಏಳಿಗೆಯನ್ನು ಬಯಸುವುದಿಲ್ಲ ಎಂದು ಪ್ರಕಾಶ್ ರಾಜ್ ವಿರುದ್ದ ನೆಟ್ಟಿಗರು ಗರಂ ಆಗಿದ್ದಾರೆ.








Comments


bottom of page