ಮಂಗಳೂರು: ಜೂನ್ 2 ರಿಂದ ಎರಡು ದಿನಗಳ ಕಾಲ ನೀರು ಪೂರೈಕೆ ಸ್ಥಗಿತ; ಎಲ್ಲೆಲ್ಲಿ ನೀರಿಲ್ಲ?
- DoubleClickMedia
- Jun 1, 2023
- 1 min read
ಮಂಗಳೂರು, ಜೂನ್ 1:
ಜೂನ್ 2 ರಿಂದ 4 ರವರೆಗೆ ಎರಡು ದಿನಗಳ ಕಾಲ ನಗರದ ಕೆಲವು ಪ್ರದೇಶಗಳಲ್ಲಿ ನೀರು ಸರಬರಾಜು ಇರುವುದಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ತಿಳಿಸಿದೆ. ತುಂಬೆ-ಬೆಂದೂರ್ ವೆಲ್-ಪಣಂಬೂರು ಕಡೆಯಿಂದ 1,000 ಮಿ.ಮೀ ಪೈಪ್ ರಿಪೇರಿ ಹಾಗೂ ಕೊಟ್ಟಾರ ಚೌಕಿಯಲ್ಲಿ 900 ಎಂಎಂ ವ್ಯಾಸದ ಪೈಪ್ ನ ಮರುಜೋಡಣೆ ಕಾರ್ಯದ ಕಾರಣ ನಗರದ ಕೆಲವೆಡೆ ಜೂನ್ 2ರ ಬೆಳಗ್ಗೆ 6ರಿಂದ ಜೂನ್ 4ರ ಬೆಳಗ್ಗೆ 6ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಎಂಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ನೀರಿಲ್ಲ?
ಬೆಂದೋರ್‌ವೆಲ್, ಪಿವಿಎಸ್ ಆಸುಪಾಸಿನ ಪ್ರದೇಶ, ಲೇಡಿಹಿಲ್, ಬಂದರ್,ಬಿಜೈ, ಸೂಟರ್‌ಪೇಟೆ, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ್‌ಬೈಲ್, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ನ ಕೆಲಭಾಗ, ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಮತ್ತು ಇತರ ಸ್ಥಳಗಳು
Komentarze