top of page
  • Writer's pictureDoubleClickMedia

ಜುಲೈ 2 ರಂದು ಐಲೇಸಾದಿಂದ ಮಳೆ ನೀರು ಕೊಯ್ಲು ಮತ್ತು ನೀರು ಇಂಗಿಸುವಿಕೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ

ಜಲ ಸಂರಕ್ಷಣೆಯ ಬಗ್ಗೆ , ಕೆರೆಗಳ ಪುನರುಜ್ಜೀವನದ ಬಗ್ಗೆ ಸಂಬಂಧಪಟ್ಟ ತಜ್ಞ ಸಂಪನ್ಮೂಲ ವ್ಯಕಿಗಳ ಭಾಗವಹಿಸುವಿಕೆಯೊಂದಿಗೆ ಸತತ ಕಾಯಕ್ರಮವನ್ನು ಮಾಡುತ್ತಿರುವ ಐಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆ ಈ ಸಾರಿ ಮಳೆ ನೀರು ಕೊಯ್ಲು , ಸಂಗ್ರಹಣೆ ಮತ್ತು ನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಗಮನ ಹರಿಸಿದೆ .

ilesa

ಸಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಪರಿಸರ ಪ್ರೇಮಿಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ. ಕೇಶವ ಹೆಗ್ಡೆ ಕೊರ್ಸೆ ಇವರು ನೀರಿನ ಕೊಯ್ಲಿನ ಪ್ರಾಮುಖ್ಯತೆ , ಮನೆ ಮನೆಗಳಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಬಳಕೆ ಹಾಗೂ ಮಳೆಯ ನೀರನ್ನು ಅಂತರ್ಜಲವಾಗಿ ಭೂಮಿಗಿಳಿಸುವ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಡಲಿದ್ದಾರೆ . ಕಾರ್ಯಕ್ರಮವು ಜೂಲೈ ತಿಂಗಳ ಎರಡನೇ ತಾರೀಕು ಭಾನುವಾರ ಸಂಜೆ 7:30 ಗಂಟೆಗೆ zoom virtual ವೇದಿಕೆಯಲ್ಲಿ ಐಲೇಸಾದ ಶ್ರೀ ಅನಂತ್ ರಾವ್ ನಡೆಸಿಕೊಡಲಿದ್ದು ಎಲ್ಲಾ ಆಸಕ್ತ ನಾಗರೀಕರು , ವಿದ್ಯಾರ್ಥಿಗಳು Zoom Meeting Id:81978777104 ಮತ್ತು Passcode: ilesa ಬಳಸಿಕೊಂಡು ಈ ಅತ್ಯವಶ್ಯಕ ಮತ್ತು ಸಕಾಲಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮುಂದಿನ ಪೀಳಿಗೆಗೆ ನೀರು ಉಳಿಸುವಲ್ಲಿ ಮತ್ತು ನೀರಿನ ಬರಗಾಲ ತಪ್ಪಿಸುವಲ್ಲಿ ಸಹಕರಿಸಬೇಕೆಂದು ಐಲೇಸಾ ದ ರುವಾರಿಗಳಲ್ಲೋರ್ವರಾದ ಶಾಂತಾರಾಮ್ ಶೆಟ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜುಲೈ 02 2023ನೇ ತಾರೀಕು ಸಂಜೆ 07:30ಕ್ಕೆ ಸರಿಯಾಗಿ ಕೆಳಗೆ ನಮೂದಿಸಿದ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು:


ಈ ಕಾರ್ಯಕ್ರಮವು https://youtube.com/@iLesaTheMusicChannel ಅಲ್ಲಿ ನೇರ ಪ್ರಸಾರದ ವ್ಯವಸ್ಥೆ ಕೂಡ ಮಾಡಲಾಗಿದೆ.


Comentarios


bottom of page