ಬಜ್ಪೆ: 5 ಲಕ್ಷ ರೂ ಲಂಚ ಪಡೆದ ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ
- DoubleClickMedia
- Jul 8, 2023
- 1 min read

ಮಂಗಳೂರು ಜುಲೈ 8: ಅನುದಾನಿತ ಶಾಲೆಯ ಸಂಚಾಲಕಿಯೊಬ್ಬರು 5 ಲಕ್ಷ ರೂಪಾಯಿ
ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರು ಹೊರವಲಯದ ಬಜ್ಪೆಯಲ್ಲಿರುವ ನಿರಂಜನ ಸ್ವಾಮಿ ಅನುದಾನಿತ ಶಾಲೆಯ ಜ್ಯೋತಿ ಪೂಜಾರಿ ಬಂಧಿತ ಸಂಚಾಲಕಿ. ಇದೇ ಶಾಲೆಯ ನಿವೃತ್ತ ಶಿಕ್ಷಕಿ ಶೋಭಾ ರಾಣಿ ಅವರು ತಮ್ಮ ಪಿಂಚಣಿ ದಾಖಲೆಗಳಿಗೆ ಸಹಿ ಮಾಡಿ ಪ್ರಾದೇಶಿಕ ಶಿಕ್ಷಣಾಧಿಕಾರಿಗಳಿಗೆ ಅನುಮೋದನೆಗಾಗಿ ಕಳುಹಿಸುವಂತೆ ಜ್ಯೋತಿ ಪೂಜಾರಿ ಅವರನ್ನು ಮನವಿ ಮಾಡಿದ್ದರು. ಆದರೆ ಜ್ಯೋತಿ 20 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಜುಲೈ 5 ರಂದು ಮತ್ತೊಮ್ಮೆ ಜ್ಯೋತಿಯವರ ನಿವಾಸಕ್ಕೆ ಶೋಭಾ ರಾಣಿಯವರು ಭೇಟಿಯಿತ್ತಿದ್ದು, ಈ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಎಸ್ಪಿ ಸಿ ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಮಂಗಳೂರು ಲೋಕಾಯುಕ್ತ ಪೊಲೀಸರಾದ ಎಸ್ಪಿ ಕಲಾವತಿ ಕೆ ಮತ್ತು ಚೆಲುವರಾಜು ಬಿ ವಹಿಸಿದ್ದು, ಪೊಲೀಸ್ ನಿರೀಕ್ಷಕ ವಿನಾಯಕ ಬಿಲ್ಲವ ಮತ್ತು ಸಿಬ್ಬಂದಿಗಳು ಸಹಕರಿಸಿದ್ದರು.
Comments