top of page

ಶೀಘ್ರದಲ್ಲೇ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಹಾಲುಣಿಸುವ ಕೇಂದ್ರ ಸ್ಥಾಪನೆ

  • Writer: DoubleClickMedia
    DoubleClickMedia
  • Aug 19, 2023
  • 1 min read

FeedinRoom


ಬೆಂಗಳೂರು, ಆಗಸ್ಟ್‌ 19: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿಅವಶ್ಯವಿರುವೆಡೆ ಮಕ್ಕಳಿಗೆ ಹಾಲುಣಿಸುವ ಕೊಠಡಿ ನಿರ್ಮಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.



ರಾಜ್ಯದಲ್ಲಿಸುಮಾರು 200ಕ್ಕೂ ಹೆಚ್ಚು ಎ ದರ್ಜೆಯ ದೇವಾಲಯಗಳ ಜತೆಗೆ ಬಿ ದರ್ಜೆಯ ದೇವಾಲಯಗಳೂ ಸಹಸ್ರಾರು ಸಂಖ್ಯೆಯಲ್ಲಿವೆ. ಇವುಗಳಲ್ಲಿಅಗತ್ಯವಿರುವೆಡೆ ಮಕ್ಕಳಿಗೆ ಹಾಲುಣಿಸುವ ಕೊಠಡಿಗಳು ಹಾಗೂ ಉರುಳುಸೇವೆ ಮಾಡುವವರಿಗೆ ವಸ್ತ್ರ ಬದಲಿಸಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


ಇನ್ನು ಬನಶಂಕರಿ ದೇವಾಲಯದ ಆವರಣದಲ್ಲಿ ಮಕ್ಕಳಿಗೆ ಹಾಲುಣಿಸುವ ಕೇಂದ್ರ ನಿರ್ಮಿಸಲಾಗಿದ್ದು, ಸಚಿವ ರಾಮಲಿಂಗಾರೆಡ್ಡಿ ಕೇಂದ್ರವನ್ನು ಉದ್ಘಾಟಿಸಿದರು. ಇದೇ ವೇಳೆ ದೇವಾಲಯದಲ್ಲಿ ಹರಕೆ ಹೊತ್ತು ಉರುಳು ಸೇವೆ ಮಾಡುವವರು ವಸ್ತ್ರ ಬದಲಿಸಲು ಅನುಕೂಲವಾಗುವಂತೆ ಕೊಠಡಿಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.




Comments


bottom of page