ಎಣ್ಣೆ ಪ್ರಿಯರಿಗೆ ಶಾಕ್: ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟು ಏರಿಕೆ
- DoubleClickMedia
- Jul 21, 2023
- 1 min read

ಬೆಂಗಳೂರು, ಜುಲೈ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ್ದ ಬಜೆಟ್ನಲ್ಲಿ ಮದ್ಯದ ಮೇಲೆ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಳ ಮಾಡಿದ್ದು, ಬಿಯರ್ ಮೇಲೆ ಶೇ 10ರಷ್ಟು ಹೆಚ್ಚಿಸಿದ್ದು ಗುರುವಾರ ಜಾರಿಗೆ ಬಂದಿದೆ.
ಭಾರತದಲ್ಲಿ ತಯಾರಾಗುವ ವಿದೇಶಿ ಬ್ರಾಂಡ್ ಮದ್ಯಕ್ಕೆ ಸಂಬಂಧಿಸಿದ ಎಲ್ಲಾ 18 ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 20 ರಷ್ಟು ಹೆಚ್ಚಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇದಲ್ಲದೇ ರಾಜ್ಯದಲ್ಲಿ ಬಿಯರ್ ಮೇಲಿನ ಸುಂಕ ಶೇ 10ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ್ದರು.
ಇನ್ಮುಂದೆ ದುಬಾರಿಯಾಗಲಿದೆ ಈ ಮದ್ಯಗಳು:
ಬಿಯರ್- ಸದ್ಯದ ದರ 230ರೂ. ಇದ್ದು 253 ರೂ. ಆಗಬಹುದು
ರಾಯಲ್ ಸ್ಟಾಗ್ 450 ರೂ. ಇದ್ದು 500. ರೂ ಆಗಬಹುದು
Imperial blue-300 ರೂ. ಇದ್ದು 360 ರೂ. ಆಗಬಹುದು
ರಾಯಲ್ ಚ್ಯಾಲೆಂಜ್- ಸದ್ಯದ ದರ 450 ರೂ ಇದ್ದು 500 ರೂ. ಆಗಬಹುದು
Mc ವಿಸ್ಕಿ-300 ರೂ. ಇದ್ದು 360 ರೂ ಆಗಬಹುದು
ಬ್ರಾಂಡಿ- mansion house-300 ರೂ. ಇದ್ದು 350 ರೂ. ಆಗಬಹುದು
ವೋಡ್ಕಾ- 300 ರೂ. ಇದ್ದು 350 ರೂ. ಆಗಬಹುದು
Black dog full-3360 ರೂ. ಇದ್ದು 4000 ರೂ. ಆಗಬಹುದು
Vat69-3300 ಇದ್ದು ರೂ. 4000 ರೂ. ಆಗಬಹುದು
Comments