top of page

ದಾವಣಗೆರೆ : ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ

  • Writer: DoubleClickMedia
    DoubleClickMedia
  • Jul 2, 2023
  • 1 min read

moving vande bharath train

ದಾವಣಗೆರೆ : ದಾವಣಗೆರೆ ರೈಲು ನಿಲ್ದಾಣದ ಬಳಿ ಶನಿವಾರ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿದೆ. ಚೇರ್ ಕಾರ್ ಒಂದರ ಕಿಟಕಿಯ ಹೊರ ಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ.


ಶನಿವಾರ ಮಧ್ಯಾಹ್ನ 3.30-4ರ ನಡುವೆ ದಾವಣಗೆರೆಯಿಂದ ರೈಲು ಹೊರಟ ಸ್ವಲ್ಪ ಹೊತ್ತಿನಲ್ಲೇ ಕಲ್ಲು ತೂರಾಟ ನಡೆದಿದೆ. ಇದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಮತ್ತು ರೈಲು ಸೇವೆಗೆ ಯಾವುದೇ ತೊಂದರೆಯಾಗಿಲ್ಲ.


"ಸಿ4 ಕೋಚ್‌ನಲ್ಲಿನ ಕಿಟಕಿಯ ಹೊರ ಮೇಲ್ಮೈಗೆ ಸಣ್ಣ ಹಾನಿಯಾಗಿದೆ. ಕಿಟಕಿಯ ಒಳಭಾಗಕ್ಕೆ ಯಾವುದೇ ಹಾನಿಯಾಗಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತನಿಖೆಯನ್ನು ಪ್ರಾರಂಭಿಸಿದೆ.

ಬೆಂಗಳೂರು-ಧಾರವಾಡ ನಡುವಿನ ವಿಶೇಷ ಅಲ್ಟ್ರಾ ಐಷಾರಾಮಿ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಜೂನ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಕರ್ನಾಟಕದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಿರುವುದು ಇದು ಮೂರನೇ ಬಾರಿ. ಫೆಬ್ರವರಿ 25, 2023 ರಂದು, ಪೂರ್ವ ಬೆಂಗಳೂರಿನಲ್ಲಿ ನಡೆದ ಕಲ್ಲು ತೂರಾಟದಲ್ಲಿ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡು ಚೇರ್ ಕಾರ್‌ಗಳ ಆರು ಬದಿಯ ಕಿಟಕಿಗಳು ಹಾನಿಗೊಳಗಾಗಿದ್ದವು.


ದೇಶದ ವಿವಿಧೆಡೆ ಈ ರೀತಿಯ ಕಲ್ಲು ತೂರಾಟದ ಘಟನೆಗಳು ನಡೆಯುತ್ತಿದ್ದು ಇವನ್ನು ತಡೆಯಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ದೂರ ‌ಪ್ರಯಾಣದ ರೈಲುಗಳಲ್ಲಿ ಆರ್‌ಪಿಎಫ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.a



Comments


bottom of page