ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಅರಣ್ಯ ಇಲಾಖೆ ಚಿಂತನೆ
- DoubleClickMedia
- Jul 20, 2023
- 1 min read

ಮೈಸೂರು,ಜು,20: 2023ನೇ ಸಾಲಿನ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ನಲ್ಲಿ ನಡೆಯಲಿದ್ದು, ನಾಡಹಬ್ಬಕ್ಕೆ ಭರದ ಸಿದ್ಧತೆ ಪ್ರಾರಂಭವಾಗಿದೆ. ಇನ್ನು ಈ ಬಾರಿ ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಕಳೆದ ಬಾರಿ ಗರ್ಭಿಣಿ ಆನೆಯನ್ನು ತಾಲೀಮಿಗೆ ಬಳಸಿ ಅರಣ್ಯ ಇಲಾಖೆ ಮುಜುಗರಕ್ಕೆ ಒಳಗಾಗಿತ್ತು. ದಸರಾ ನಂತರ ಆನೆ ಲಕ್ಷ್ಮೀ ರಾಮಾಪುರ ಕ್ಯಾಂಪ್ ನಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು. ಹೀಗಾಗಿ ಈ ಬಾರಿ ಎಚ್ಚೆತ್ತ ಅರಣ್ಯ ಇಲಾಖೆ ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಮುಂದಾಗಿದೆ. ಆನೆ ಕ್ಯಾಂಪ್ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಆದ ಬಳಿಕ ದಸರಾಗೆ ಹೆಣ್ಣಾನೆಗಳು ಆಗಮಿಸಲಿವೆ.
ಈ ತಿಂಗಳಾಂತ್ಯಕ್ಕೆ ಆನೆಗಳ ಪಟ್ಟಿ ರೆಡಿಯಾಗಲಿದೆ. 14 ಆನೆಗಳನ್ನ ದಸರಾಗೆ ಕರೆತರಲು ಇಲಾಖೆ ಚಿಂತನೆ ನಡೆಸಿದೆ. ಈ ಬಾರಿ ಅರ್ಜುನ, ಗೋಪಾಲಸ್ವಾಮಿ ಆನೆಗಳು ದಸರಾದಲ್ಲಿ ಭಾಗಿಯಾಗುವುದಿಲ್ಲ. ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ. ಹಾಗೂ ಅರ್ಜುನ ಆನೆಗೆ ವಯಸ್ಸಾದ ಕಾರಣ ದಸರಾ ಹಬ್ಬದಿಂದ ಕೈಬಿಡಲಾಗಿದೆ. ಕ್ಯಾಂಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈ ಬಾರಿ ದಸರಾ ಜಂಬೂಸವಾರಿ ನಡೆಯಲಿದೆ.
Comments