ರಾಜ್ಯದ ಜನರಿಗೆ ಶಾಕ್ ಕೊಟ್ಟ ಸರ್ಕಾರ: ನಂದಿನಿ ಹಾಲಿನ ದರ 3 ರೂ ಏರಿಕೆ
- DoubleClickMedia
- Jul 22, 2023
- 1 min read

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಈ ಹೊಸ ದರವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ.
ಕೆಎಂಎಫ್ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ. ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದದ್ದು, ದರ ಏರಿಕೆ ಹಣ ರೈತರಿಗೆ ತಲುಪಲಿದೆ.
ಪ್ರಸ್ತುತ ಹಾಲಿನ ದರ (ಪ್ರತಿ ಲೀಟರ್) :
ಟೋನ್ಡ್ ಹಾಲು: 39
ಹೋಮೋಜಿನೈಸ್ಡ್ ಹಾಲು: 40
ಹೋಮೋಜಿನೈಸ್ಡ್ ಹಸುವಿನ ಹಾಲು: 44
ಸ್ಪೆಷಲ್ ಹಾಲು: 45
ಶುಭಂ ಹಾಲು: 45
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 46
ಸಮೃದ್ಧಿ ಹಾಲು: 50
ಸಂತೃಪ್ತಿ ಹಾಲು: 52
ಡಬಲ್ಡ್ ಟೋನ್ಡ್ ಹಾಲು: 38
ಮೊಸರು ಪ್ರತಿ ಕೆ.ಜಿಗೆ: 47
3 ರೂಪಾಯಿ ದರ ಏರಿಕೆ ಬಳಿಕ ಪ್ರತಿ ಲೀಟರ್‌ಗೆ :
ಟೋನ್ಡ್ ಹಾಲು: 42
ಹೋಮೋಜಿನೈಸ್ಡ್ ಹಾಲು: 43
ಹೋಮೋಜಿನೈಸ್ಡ್ ಹಸುವಿನ ಹಾಲು: 47
ಸ್ಪೆಷಲ್ ಹಾಲು: 48
ಶುಭಂ ಹಾಲು: 48
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 49
ಸಮೃದ್ಧಿ ಹಾಲು: 53
ಸಂತೃಪ್ತಿ ಹಾಲು: 55
ಡಬಲ್ಡ್ ಟೋನ್ಡ್ ಹಾಲು: 41
ಮೊಸರು ಪ್ರತಿ ಲೀಟರ್‌ಗೆ: 50
Comments