ಪೋಷಕರಿಗೆ ದೂರು ನೀಡಿದಕ್ಕೆ ಉಪನ್ಯಾಸಕರಿಗೆ ಮಚ್ಚು ತೋರಿಸಿದ ವಿದ್ಯಾರ್ಥಿ
- DoubleClickMedia
- Aug 25, 2023
- 1 min read

ಮಂಡ್ಯ, ಆಗಸ್ಟ್ 25: ಉಪನ್ಯಾಸಕರೊಬ್ಬರು ಪೋಷಕರಿಗೆ ಕಂಪ್ಲೆಂಟ್ ಹೇಳಿದಕ್ಕೆ ವಿದ್ಯಾರ್ಥಿಯೋರ್ವ ಮಚ್ಚು ತೋರಿಸಿ ದರ್ಪ ತೋರಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ತರಗತಿಗೆ ಬರುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ, ಉಪನ್ಯಾಸಕರಿಗೆ ಲಾಂಗ್ ತೋರಿಸಿದ್ದಾನೆ. ಉದಯ್ ಗೌಡ (18) ಎನ್ನುವ ವಿದ್ಯಾರ್ಥಿ ಡಿಪ್ಲೊಮೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಈತ ತರಗತಿಗೆ ಬರುತ್ತಿರಲ್ಲವಂತೆ. ಹೀಗಾಗಿ ಉಪನ್ಯಾಸಕ ಚಂದನ್, ಉದಯ್ ಕ್ಲಾಸ್ಗೆ ಸರಿಯಾಗಿ ಬರುತ್ತಿಲ್ಲವೆಂದು ಆತನ ಪೋಷಕರಿಗೆ ಹೇಳಿದ್ದಾರೆ. ಇದರಿಂದ ಕೆರಳಿದ ಉದಯ್ ಗೌಡ ಲಾಂಗ್ ತೋರಿಸಿ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಘಟನೆಯ ವಿಡಿಯೋ ವಿದ್ಯಾರ್ಥಗಳ ಮೊಬೈಲ್ನಲ್ಲಿ ಸೆರೆಯಾಗಿದೆ. ಅತ್ತ ಉಪನ್ಯಾಸಕರೂ ವಿದ್ಯಾರ್ಥಿ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ಉದಯ್ಗೌಡ ಪೋಷಕರೊಂದಿಗೆ ಬಂದು ಕ್ಷಮೆಯಾಚಿಸಿದ್ದಾನೆ.
Comentarios