top of page

ಮಂಡ್ಯ ಮೂಲದ ಕಿರುತೆರೆ ನಟ ಹೃದಯಾಘಾತದಿಂದ ನಿಧನ

  • Writer: DoubleClickMedia
    DoubleClickMedia
  • Aug 18, 2023
  • 1 min read

Mandya Actor

ಇತ್ತೀಚೆಗೆ ಚಿಕ್ಕವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿದೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನ ನೋವಿನಿಂದ ರಾಜ್ಯದ ಜನರು ಹೊರಬರುವ ಮೊದಲೇ ಕಿರುತೆರೆ ನಟ ಪವನ್ ಅವರು ಮೃತಪಟ್ಟಿದ್ದಾರೆ. ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಮಂಡ್ಯ ಮೂಲದ ಪವನ್ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 25 ವರ್ಷ ವಯಸ್ಸಾಗಿತ್ತು.



ಮುಂಬೈ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ( ಆಗಸ್ಟ್ 17 ) ಮುಂಜಾನೆ 5.00 ಗಂಟೆಗೆ ತೀವ್ರ ಹೃದಯಘಾತದಿಂದ ಪ್ರಾಣ ಬಿಟ್ಟಿದ್ದಾರೆ. ನಟನಾಗಿದ್ದರಿಂದ ತನ್ನ ದೇಹ ಆಕರ್ಷಣೆಗಾಗಿ ಅತಿಯಾದ ವ್ಯಾಯಮಕ್ಕೆ ತಲ್ಲಿನರಾಗಿದ್ದ ಹೀಗಾಗಿದೆ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ.



ಇಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ.



Comentarios


bottom of page