top of page

ವಿಶೇಷ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

  • Writer: DoubleClickMedia
    DoubleClickMedia
  • Jul 20, 2023
  • 1 min read

ViratKohli

ಪೋರ್ಟ್ ಆಫ್ ಸ್ಪೇನ್​ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500ನೇ ಪಂದ್ಯವನ್ನಾಡಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 499 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಆಡುವ ಮೂಲಕ ಅಂತರಾಷ್ಟ್ರೀಯ 500 ಪಂದ್ಯಗಳನ್ನು ಆಡಿದ ಹತ್ತನೇ ಆಟಗಾರನಾಗಲಿದ್ದಾರೆ. ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.



ಭಾರತ-ವೆಸ್ಟ್ ಇಂಡೀಸ್ ನಡುವಣ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದು, ಅದರಂತೆ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಲಿದೆ.


ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಕೇವಲ 3 ದಿನಗಳಲ್ಲಿ ಇನ್ನಿಂಗ್ಸ್ ಮತ್ತು 141 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು, ಸರಣಿ ತನ್ನದಾಗಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಇದೆ. ಅಲ್ಲದೆ ಈ ಟೆಸ್ಟ್ ಪಂದ್ಯ ಉಭಯ ದೇಶಗಳ ನಡುವಿನ 100ನೇ ಟೆಸ್ಟ್ ಪಂದ್ಯವಾಗಿರುವುದರಿಂದ ಈ ಪಂದ್ಯವನ್ನು ಗೆಲ್ಲುವುದು ಉಭಯ ದೇಶಗಳ ಗುರಿಯಾಗಿದೆ.



ಎರಡನೇ ಟೆಸ್ಟ್​ಗೆ ವೆಸ್ಟ್ ಇಂಡೀಸ್ ತಂಡ:


ಕ್ರೇಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಸೆ, ತೇಜ್ ನಾರಾಯಣ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೆಮರ್ ರೋಚ್, ಕೆವಿನ್ ವಾರ್ ಸಿಂಕ್ಲೇರ್ ಮತ್ತು ಜೋಮೆಲ್ ವಾರ್ ಸಿಂಕ್ಲೇರ್.


ಮೀಸಲು ಆಟಗಾರರು- ಟೆವಿನ್ ಇಮ್ಲಾಚ್ ಮತ್ತು ಅಕೀಮ್ ಜೋರ್ಡಾನ್.



2ನೇ ಟೆಸ್ಟ್​ಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.


ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಫ್ಯಾನ್‌ಕೋಡ್ ಚಂದಾದಾರಿಕೆಯನ್ನು ಹೊಂದಿರುವ ಅಭಿಮಾನಿಗಳು ತಮ್ಮ ಮೀಸಲಾದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಈ ಪಂದ್ಯವನ್ನು ವೀಕ್ಷಿಸಬಹುದು.



Comments


bottom of page